ಯಳಂದೂರು: ಮೇ ತಿಂಗಳು ಬಸವಣ್ಣ, ಶಂಕರ, ರಾಮಾನುಜ, ಭಗೀರಥ ಮುಂತಾದ ಮಹಾನುಭಾವರ ಜಯಂತಿಗಳ ಸಂಭ್ರಮ. ಆಯಾ ನೆಲದಲ್ಲಿ ಅಡ್ಡಾಡಿದ ಪುಣ್ಯ ಪುರುಷರು ಈಗಲೂ ಅಲ್ಲಲ್ಲಿ ಪೂಜಾ ಕರ್ಯಗಳಿಂದಶೋಭಿತರಾಗಿದ್ದಾರೆ. ವಿಶಿಷ್ಟಾದ್ವೈತ ತತ್ವ ಪ್ರತಿಪಾದಿಸಿದ್ದ ರಾಮಾನುಜಾಚಾರ್ಯರು ಬನದ ದೇವ ರಂಗನಾಥನ ಆಲಯದಲ್ಲಿ ನೆಲೆಸಿದ್ದರು. ವೈದಿಕ ಪರಂಪರೆಯನ್ನು ಪರಿಚಯಿಸಿದ್ದರು. ಇವರ ಜಯಂತಿಯನ್ನುಗುರುವಾರದಂದು ಮೇಷ ಮಾಸದ ಆರ್ದ್ರಾ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ 11ನೇ ಶತಮಾನದಲ್ಲೇ ರಾಮನುಜರು ಭೇಟಿ ನೀಡಿರಂಗನಾಥನ ದರ್ಶನ ಪಡೆದಿದ್ದರು. ಶ್ರೀಮನ್ನಾರಾಯಣನಿಗೆ ಹಾಸಿಗೆಯಾಗಿದ್ದುಕೊಂಡು ಸೇವೆಸಲ್ಲಿಸಿದ ಆದಿಶೇಷನೇ ರಾಮನುಜರಾಗಿ ಅವತರಿಸಿದರು ಎಂಬ ಪ್ರತೀತಿ ಇಲ್ಲಿದೆ.ಮಹಾವಿಷ್ಣುವಿನ ಆರಾಧಕರಾಗಿದ್ದ ಇವರು ತಮ್ಮ ಅನುಯಾಯಿಗಳಿಗೆ ವೈಷ್ಣವ ಚಿಂತನೆಗಳ ಸಾರವನ್ನು ಜಾತಿ, ಮತ ಭೇದವಿಲ್ಲದೆ ಉಣಬಡಿಸಿದ್ದರು. ಇಲ್ಲಿ ಕೆಲವು ಕಾಲ ನೆಲೆಸಿದ್ದರು ಎನ್ನಲಾಗಿದೆ.

ರಾಮನುಜರು ನೆರೆಯ ತಮಿಳುನಾಡಿನಲ್ಲಿ ಜನಿಸಿದ್ದರೂ ಮಂಡ್ಯ, ಚಾಮರಾಜನಗರ, ಹಾಸನ,ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಪೂಜನೀಯರು. ಇವರ ಪ್ರಭಾವದಿಂದ ಹೊಯ್ಸಳ ವಿಷ್ಣುವರ್ಧನವೈಷ್ಣವ ಮತಕ್ಕೆ ಹತ್ತಿರವಾದ. ಅವರ ಅನುಯಾಯಿಗಳು ಮೇಲುಕೋಟೆ ಮತ್ತು ವಿವಿಧರಾಜ್ಯಗಳಲ್ಲಿ ಈಗಲೂ ನೆಲೆಸಿದ್ದಾರೆ.

‘ಬಿಳಿಗಿರಿಬನ ಹಳೆಯ ದೇವಾಲಯದ ಎಡಭಾಗದಲ್ಲಿ ನಮ್ಮಾಳ್ವರ್ ಮತ್ತು ರಾಮಾನುಜರಶಿಲ್ಪಗಳನ್ನು ಸ್ಥಾಪಿಸಲಾಗಿತ್ತು. ಆದರೆ, ದೇವಾಲಯ ಕಾಮಗಾರಿ ನಡೆಯುತ್ತಿರುವುದರಿಂದಇವರ ಮೂರ್ತಿ ಈಗ ಅಲ್ಲಿಲ್ಲ. ಆದರೆ, ಈಗ ರಂಗಸ್ವಾಮಿಯ ಪಕ್ಕ ರಾಮಾನುಜ ಅವರ ಮೂರ್ತಿ ಇಟ್ಟು ಅರ್ಚಿಸಲಾಗುತ್ತಿದೆ’ ಎಂದು ಅರ್ಚಕ ರವಿಕುಮಾರ್ ಮಾಹಿತಿ ನೀಡಿದರು.

ಗುರುವಿನ ವಿರೋಧ

ರಾಮಾನುಜಾಚಾರ್ಯರು ವಿವಿಧ ಶಾಸ್ತ್ರ ಪಾಠಗಳಲ್ಲಿ ಪಾರಂಗತರಾಗಿದ್ದರು. ಗುರುಗಳು ತಾರಕಮಂತ್ರಉಪದೇಶಿಸಿದ್ದರು. ಅಷ್ಟೇ ಅಲ್ಲ, ಈ ಉಪದೇಶ ಇತರರಿಗೆ ಬೋಧಿಸದಂತೆ ಕಟ್ಟಾಜ್ಞೆವಿಧಿಸಿದ್ದರು. ಇದರಿಂದ ಕೋಪಗೊಂಡ ಗುರುವಿಗೆ ಅವರು ‘ಇಷ್ಟು ಜನರ ಉದ್ಧಾರವಾಗುವುದಾದರೆನಾನೊಬ್ಬ ನರಕಕ್ಕೆ ಹೋಗಲು ಅಡ್ಡಿ ಇಲ್ಲ’ ಎಂದು ತಿಳಿಸಿದರು. ಧನುರ್ದಾಸನಿಗೆಶ್ರೀರಂಗನಾಥನ ದರ್ಶನ ಮಾಡಿಸಿ ಭಗವಂತನ ಬಗ್ಗೆ ಭಕ್ತಿ ತುಂಬಿದರು. ಮೇಲುಕೋಟೆಗೆಆಗಮಿಸಿ ತಿರುನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದರಿಂದ ಇವರ ಚಿಂತನೆಗಳುತುಳಿತಕ್ಕೆ ಒಳಗಾದವರ ಬದುಕಿಗೆ ಬೆಳಕಾದವು.

‘ದೇಗುಲಕ್ಕೆ ಬರುವ ರಾಮಾನುಜರ ಶಿಷ್ಯರು ಅವರ ಸ್ತೋತ್ರಗಳನ್ನು ಪಠಿಸುತ್ತಾರೆ. ರಂಗನಾಥನಆಲಯದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಾರೆ. ತಿರುಪತಿ, ತಮಿಳುನಾಡು ಮತ್ತುರಾಜ್ಯದ ವಿವಿಧ ಭಾಗಗಳಿಂದ ಈಗಲೂ ಶ್ರೀಗಳ ದರ್ಶನ ಪಡೆಯುತ್ತಾರೆ. ಇವರು ರಚಿಸಿದಒಂಬತ್ತು ಗ್ರಂಥಗಳಲ್ಲಿ ಜನಸಾಮಾನ್ಯರೂ ಮೋಕ್ಷ ಪಡೆಯುವ ಮಾರ್ಗವನ್ನುವಿವರಿಸಿದ್ದಾರೆ. ನೂತನ ದೇವಾಲಯ ಕಾಮಗಾರಿ ಪೂರ್ಣಗೊಂಡ ನಂತರ ರಾಮಾನುಜರಿಗೆ ಉತ್ಸವಗಳುನಡೆಯಲಿವೆ’ ಎಂದು ಹೇಳುತ್ತಾರೆ ಅರ್ಚಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.