ಸಂತೇಮರಹಳ್ಳಿ: ಈ ವರ್ಷ ಉತ್ತಮ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಕಬಿನಿ ನಾಲೆಯಲ್ಲಿ ವ್ಯವಸಾಯಕ್ಕೆ ನೀರು ಹರಿಸದ ಪರಿಣಾಮ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರು ಕಂಗಾಲಾಗಿದ್ದರು. ಈ ಬಾರಿ ಮಂಚಿತವಾಗಿಯೇ ಕಬಿನಿ ನಾಲೆಯಲ್ಲಿ ನೀರು ಹರಿಯುತ್ತಿರುವುದರಿಂದ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಭತ್ತ ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.

ಕಳೆದ ವರ್ಷ ಮಳೆ ಕಡಿಮೆಯಾಗಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೃಷಿ ಮಾಡಲು ನಾಲೆಗೆ ನೀರು ಸಮರ್ಪಕವಾಗಿ ಹರಿದಿರಲಿಲ್ಲ.ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೂಡ ನೀರಿನ ಅಲಭ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಭತ್ತ ಬೆಳೆಯಲು ಹಿಂದೇಟು ಹಾಕಿದ್ದರು.

ಆದರೆ ಈ ಬಾರಿ ಕಬಿನಿ ಮೈದುಂಬಿರುವ ಹಿನ್ನೆಲೆಯ್ಲಿ ಕಳೆದ ವಾರ ಕೆರೆಗಳಿಗೆ ನೀರು ತುಂಬಿಸಲು ನಾಲೆಗಳಿಗೆ ನೀರು ಬಿಡಲಾಗಿದೆ. ಜತೆಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯದ ಉದ್ದೇಶಕ್ಕೂ ನೀರು ಬಿಡುವ ಬಗ್ಗೆ ನೀರಾವರಿ ಸಮಿತಿ ಸಭೆ ತೀರ್ಮಾನ ಕೈಗೊಂಡು ಮುಂಚಿತವಾಗಿಯೇ ನೀರು ಹರಿಸುತ್ತಿದೆ.

ನಾಲೆಯಲ್ಲಿ ಹರಿಯುತ್ತಿರುವ ನೀರು ಹಾಗೂ ಉತ್ತಮ ಮಳೆಯಿಂದ ರೈತರು ಹರ್ಷಗೊಂಡ ಜಮೀನುಗಳನ್ನು ಹದಗೊಳಿಸಿ ಭತ್ತ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 33 ಕಿ.ಮೀ ವರೆಗೂ ಕಬಿನಿ ನಾಲೆ ಹರಿಯುತ್ತದೆ. ಆಲ್ದೂರು, ಬಾಗಳಿ, ಕಮರವಾಡಿ, ಬಾಣಹಳ್ಳಿ, ತೆಳ್ಳನೂರು, ಕೆಂಪನಪುರ, ಇರಸವಾಡಿ ಹಾಗೂ ಸುತ್ತೂರು ಗ್ರಾಮಗಳ 3 ಸಾವಿರ ಎಕರೆ ಪ್ರದೇಶ ಕಬಿನಿ ನಾಲೆಯ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಟ್ಟಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.

ನೀರು ಹರಿದರೂ ನಾಲೆಯಲ್ಲಿ ಹೂಳು: ಕಬಿನಿ ಮುಖ್ಯ ನಾಲೆಯಿಂದ ವ್ಯವಸಾಯಕ್ಕೆ ನೀರು ಹರಿಸುವ ಉಪ ನಾಲೆಗಳಲ್ಲಿ ಹೂಳು ತುಂಬಿಕೊಂಡಿದೆ. ಹಲವು ಕಡೆ ದುರಸ್ತಿಯಾಗಬೇಕಿದೆ ಎಂದು ಅಚ್ಚುಕಟ್ಟು ರೈತರು ದೂರುತ್ತಾರೆ. ಉಪ ನಾಲೆಯ ಮಾರ್ಗಗಳಲ್ಲಿ ಕೊರಕಲು ಉಂಟಾಗಿದೆ. ನಾಲೆ ನೀರಿನ ರಭಸ ತಡೆಯುವಷ್ಟು ಶಕ್ತವಾಗಿಲ್ಲ.

ಮುಖ್ಯ ನಾಲೆ ಸೇರಿದಂತೆ ಬಹುತೇಕ ನಾಲೆಗಳು ಗಿಡಗಂಟಿಗಳಿಂದ ತುಂಬಿಹೋಗಿವೆ. ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ. ನಾಲೆಗೆ ನೀರು ಬಿಡುವ ಮುನ್ನ ಉಪ ನಾಲೆಗಳನ್ನು ದುರಸ್ತಿಪಡಿಸಿಲ್ಲ. ಜಮೀನಿಗೆ ಹರಿಸುವ ತೂಬುಗಳು ಮುರಿದು ಬಿದ್ದಿವೆ. ರೈತರು ಮರದ ಹಲಗೆಗಳನ್ನು ಬಳಸಿಕೊಂಡು ಜಮೀನುಗಳಿಗೆ ನೀರು ಪಡೆಯುವಂತಾಗಿದೆ ಎನ್ನುತ್ತಾರೆ ರೈತರು.

ಜಮೀನುಗಳಲ್ಲಿರುವ ಸಣ್ಣ ಕಾಲುವೆಗಳನ್ನು ದುರಸ್ತಿಪಡಿಸದ ಕಾರಣ ನೀರು ಪೋಲಾಗುತ್ತಿದೆ. ಜತೆಗೆ ತಳ ಭಾಗದಲ್ಲಿರುವ ಜಮೀನುಗಳಿಗೆ ನೀರು ತಲುಪದೆ ವ್ಯವಸಾಯಕ್ಕೆ ಹಿನ್ನಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಬೆಳೆಗಾದರೂ ಉಪ ನಾಲೆಗಳನ್ನು ದುರಸ್ತಿಪಡಿಸಬೇಕು ಎಂದು ರೈತರಾದ ಕುಮಾರಸ್ವಾಮಿ, ನಾಗೇಶ್ ಒತ್ತಾಯಿಸಿದ್ದಾರೆ.

ಈ ಬಾರಿ ಕಬಿನಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ವ್ಯವಸಾಯಕ್ಕೆ ನೀರು ಬಿಡಲು ನೀರಾವರಿ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಕಬಿನಿ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವ ನಾರಾಯಣ 'ಪ್ರಜಾವಾಣಿ"ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.