ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯಲ್ಲಿ ತಮ್ಮ ಇಷ್ಟದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಲಕ್ಷಾಂತರ ರೂಪಾಯಿ ಹಣವನ್ನು ಹಿಡಿದುಕೊಂಡು ಬಾಜಿಗೆ ಆಹ್ವಾನಿಸಿದ್ದ ಇಬ್ಬರನ್ನು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಡಾವಣೆಯ ನಿವಾಸಿ ಮಲ್ಲೇಶ್ ಹಾಗೂ ವಿಡಿಯೊ ಮಾಡಿದ್ದ ರಾಜು ಎಂಬುವರು ಬಂಧಿತರು.

ಮಲ್ಲೇಶ್ ತರಕಾರಿ ವ್ಯಾಪಾರಿಯಾಗಿದ್ದು ₹ 8 ಲಕ್ಷ ಹಣದ ಕಟ್ಟು ಹಿಡಿದುಕೊಂಡು ಪಂಥಕ್ಕೆ ಆಹ್ವಾನಿಸಿದ್ದರು.

‘ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ₹ 3 ಲಕ್ಷ, ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ ₹ 3 ಲಕ್ಷ ಹಾಗೂ ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರವಾಗಿ ₹ 2 ಲಕ್ಷ ಹಣ ಕಟ್ಟುತ್ತೇನೆ, ಬನ್ನಿ ಬಾಜಿ ಕಟ್ಟಿ’ ಎಂದು ಮಲ್ಲೇಶ್ ಆಹ್ವಾನಿಸಿದ್ದರು.

ಚುನಾವಣಾ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಠಾಣೆ ಪೊಲೀಸರು ಜೂಜಾಟಕ್ಕೆ ಪ್ರಚೋದನೆ ನೀಡಿದ್ದಾರೆಂದು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.