ಚಾಮರಾಜನಗರ: ಹನೂರು ತಾಲ್ಲೂಕಿನಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಯೇಸು ಕ್ರಿಸ್ತರ ಭಾವಚಿತ್ರವಿರುವ ಪ್ರಶಸ್ತಿ ಪತ್ರ ವಿತರಿಸಿದ್ದ ಹನೂರಿನ ಕ್ರಿಸ್ತರಾಜ ಪದವಿಪೂರ್ವ ಕಾಲೇಜು ಹಾಗೂ ಮಾರ್ಟಳ್ಳಿಯ ಸೇಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಪ್ರಶಸ್ತಿ ಪ್ರಮಾಣ ಪತ್ರದಲ್ಲಿ ಕ್ರಿಶ್ಚಿಯನ್ ಧರ್ಮದ ದೇವರ ಭಾವಚಿತ್ರಗಳ ಬಳಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ನೋಟಿಸ್ ನೀಡಿರುವ ಡಿಡಿಪಿಯು ’ಸರ್ಕಾರಿ ಕ್ರೀಡಾಕೂಟದ ಪ್ರಶಸ್ತಿ ಪ್ರಮಾಣ ಪತ್ರದಲ್ಲಿ ಕ್ರಿಶ್ಚಿಯನ್ ದೇವರ ಭಾವಚಿತ್ರ ಮುದ್ರಿಸಿ ವಿತರಿಸಿರುವುದು ಸರ್ಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇತರ ಧರ್ಮದವರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಿದೆ. ಘಟನೆ ಸಂಬಂಧ 3 ದಿನಗಳೊಳಗೆ ಲಿಖಿತ ಉತ್ತರ ನೀಡದಿದ್ದರೆ ಕಾಲೇಜಿನ ಮಾನ್ಯತೆ ಹಿಂಪಡೆಯಲು ಶಿಫಾರಸು ಮಾಡಲಾಗುವುದು ಎಂದು ಆದೇಶಿಸಿದ್ದಾರೆ.

ಬದಲಿ ಪ್ರಶಸ್ತಿ ಪತ್ರ:

ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ಪ್ರಶಸ್ತಿ ಪತ್ರಗಳನ್ನು ಹಿಂಪಡೆಯಲಾಗಿದೆ, ಕೂಡಲೇ ಸರ್ಕಾರದ ಲಾಂಛನ ಹಾಗೋ ಕ್ರೀಡಾಕೂಟದ ಲೋಗೋ ಇರುವ ಹೊಸ ಪ್ರಮಾಣ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಯು ಮಂಜುನಾಥ್ ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.