ಚಿಂತಾಮಣಿ: ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಇರುತ್ತವೆ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ, ತಾಲ್ಲೂಕಿನ ಭೂಮಿಶೆಟ್ಟಹಳ್ಳಿಯಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯವು ಹೆಸರಿಗೆ ತಕ್ಕಂತೆ ಆದರ್ಶವಾಗಿ ಕಾರ್ಯನಿರ್ವಹಿಸುತ್ತಿದೆ.

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತಿದೆ. ಈ ಮೂಲಕ ಆದರ್ಶ ವಿದ್ಯಾಲಯವು ಇತರ ಸರ್ಕಾರಿ ಶಾಲೆಗಳು ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿದೆ.

ಆಧುನಿಕ ಸೌಲಭ್ಯಗಳ ಬಳಕೆ, ಸ್ಮಾರ್ಟ್ ತರಗತಿ, ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡುವ ವಿಭಿನ್ನ ರೀತಿಯ ಕಲಿಕಾ ತಂತ್ರಗಳು, ಗುಣಮಟ್ಟದ ಮೂಲಸೌಲಭ್ಯಗಳು, ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕರ ಬದ್ಧತೆಯಿಂದ ಸರ್ಕಾರಿ ಆದರ್ಶ ವಿದ್ಯಾಲಯವು ಯಾವ ಖಾಸಗಿ ಶಾಲೆಗಳಿಗಿಂತಲೂ ಕಡಿಮೆಯೇನಿಲ್ಲ ಎಂಬಂತಿದೆ. 6 ರಿಂದ 10ನೇ ತರಗತಿವರೆಗೆ 370 ವಿದ್ಯಾರ್ಥಿಗಳು ಕಲಿಯುತ್ತಿರುವ ಆದರ್ಶ ವಿದ್ಯಾಲಯದಲ್ಲಿ 16 ಶಿಕ್ಷಕರಿದ್ದಾರೆ.

ವಿದ್ಯಾಲಯದಲ್ಲಿ ಎಲ್ಲ ಶಿಕ್ಷಕರೂ ಶ್ರಮವಹಿಸಿ, ಅತ್ಯಂತ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು. ವಿದ್ಯಾರ್ಥಿಗಳಿಗೆ ಕಠಿಣ ಎನಿಸುವ ಅಂಶಗಳ ಕುರಿತು ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತಾರೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಎಲ್ಲ ಮೂಲ ಸೌಕರ್ಯಗಳು ಶಾಲೆಯಲ್ಲಿದೆ.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಪೋಷಕರಲ್ಲೂ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದ್ದು, ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವುದು ಸಾಮಾನ್ಯವಾಗಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಹೀಗಾಗಿ, ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆ ಆಕರ್ಷಿಸಲು ಸರ್ಕಾರ ತಾಲ್ಲೂಕಿಗೆ ಒಂದರಂತೆ ಆಂಗ್ಲ ಮಾಧ್ಯಮದ ಆದರ್ಶ ವಿದ್ಯಾಲಯ ಸ್ಥಾಪಿಸಿದೆ.

ಸಾಮಾನ್ಯವಾಗಿ ಪ್ರತಿವರ್ಷ ಜನವರಿ ತಿಂಗಳ ಆರಂಭದಲ್ಲಿ ಶಿಕ್ಷಕರು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು ನಡೆಸುತ್ತಾರೆ. ಕಠಿಣ ವಿಷಯಗಳಾದ ಗಣಿತ, ವಿಜ್ಞಾನ, ಆಂಗ್ಲಭಾಷೆಗಳಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಹಲವಾರು ಪ್ರಯೋಗಗಳನ್ನು ಮಾಡಲಾಗುತ್ತಿದೆ. ಪ್ರತಿನಿತ್ಯ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚೆ ಮತ್ತು ಶಾಲಾ ಸಮಯ ಮುಕ್ತಾಯದ ನಂತರ ಒಂದು ಗಂಟೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಶನಿವಾರ, ಭಾನುವಾರವೂ ವಿಶೇಷ ತರಗತಿಗಳು ನಡೆಯುತ್ತವೆ.

ಕ್ರೀಡೆಗಳ ಅಭ್ರಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿದ್ಯಾಲಯದ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳು 2024ನೇ ಸಾಲಿನಲ್ಲಿ ಜಿಲ್ಲೆ ಮತ್ತು ವಿಭಾಗ ಹಂತದಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 800 ಮೀ ಓಟದಲ್ಲಿ ಪ್ರಣೀತ ಎಂಬ ವಿದ್ಯಾರ್ಥಿನಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿವರ್ಷ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ್ವರ್ ಹೇಳುತ್ತಾರೆ.

ಸರ್ಕಾರಿ ಆದರ್ಶ ವಿದ್ಯಾಲಯವು ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಕ್ರೀಡಾ ಚಟುವಟಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪಠ್ಯೇತರ ಚಟುವಟಿಕೆಗಳು ನಡೆಯುತ್ತವೆ. ನುರಿತ ಬೋಧಕ ವೃಂದ ಹಾಗೂ ತಂತ್ರಜ್ಞಾನದ ವ್ಯವಸ್ಥೆ ಇದೆ. ಬಿ.ಎಚ್. ಮಂಜುನಾಥ್ ಮುಖ್ಯ ಶಿಕ್ಷಕರು ಸರ್ಕಾರಿ ಆದರ್ಶ ವಿದ್ಯಾಲಯ

ಸ್ಮಾರ್ಟ್ ತರಗತಿ ಸೇರಿ ವಿವಿಧ ಸೌಲಭ್ಯ

ಚಿಂತಾಮಣಿ ತಾಲ್ಲೂಕಿನಲ್ಲಿ 2010–11ರಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯ ಮಂಜೂರಾಗಿದ್ದು ಆರಂಭದಲ್ಲಿ ನಗರದ ನೆಕ್ಕುಂದಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ತಾಲ್ಲೂಕಿನ ಭೂಮಿಶೆಟ್ಟಿಹಳ್ಳಿ ಬಳಿ ಶಾಲೆಗೆ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಿ ವಿದ್ಯಾಲಯವನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ವಿದ್ಯಾಲಯದಲ್ಲಿ ಕಂಪ್ಯೂಟರ್ ಸ್ಮಾರ್ಟ್ ತರಗತಿ ಪ್ರೊಜೆಕ್ಟರ್ ವಿಜ್ಞಾನ ಮತ್ತು ಗಣಿತದ ಕ್ಲಬ್ ಸ್ಟೆಮ್ ಲ್ಯಾಬ್ ಗ್ರಂಥಾಲಯ ಮೊದಲಾದ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆಗಳಿವೆ. ಅರ್ಹತಾ ಪರೀಕ್ಷೆ ಮೂಲಕ 6ನೇ ತರಗತಿಗೆ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಂಗ್ಲಭಾಷೆ ಪ್ರಥಮ ಭಾಷೆ ಕನ್ನಡ ದ್ವಿತೀಯ ಭಾಷೆ ಹಿಂದಿ ತೃತೀಯ ಭಾಷೆಯಾಗಿದ್ದು ಎನ್ಸಿಇಆರ್ಟಿ ಪಠ್ಯಕ್ರಮ ಹೊಂದಿದೆ. ಗಣಿತ ಸಾಮಾನ್ಯ ವಿಜ್ಞಾನ ಸಮಾಜ ವಿಜ್ಞಾನ ಮುಖ್ಯ ವಿಷಯಗಳು ರಾಜ್ಯ ಪಠ್ಯಕ್ರಮವಾಗಿದೆ.

ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನ

ಪ್ರತಿ ಶಿಕ್ಷಕರೂ ಸಂಖ್ಯೆಗೆ ಅನುಗುಣವಾಗಿ 10–11 ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಆ ಶಿಕ್ಷಕರದ್ದೇ ಆಗಿರುತ್ತದೆ. ಪ್ರತಿನಿತ್ಯ ಮೊಬೈಲ್ ಮೂಲಕ ಮೇಲ್ವಿಚಾರಣೆ ನಡೆಸುತ್ತಾರೆ. ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ. ಮನೆಗಳಲ್ಲಿನ ಕಲಿಕಾ ವಾತಾವರಣ ಪೋಷಕರ ಆಸಕ್ತಿ ಎಲ್ಲವನ್ನು ಗಮನಿಸಿ ಸಲಹೆ ಮತ್ತು ಸೂಚನೆ ನೀಡುತ್ತಾರೆ. ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಬೋಧನೆ ಮಾಡಲಾಗುತ್ತಿದೆ. ಪ್ರತಿ ಶನಿವಾರ ಪಠ್ಯವನ್ನು ರಸಪ್ರಶ್ನೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ರಸಪ್ರಶ್ನೆ ಗುಂಪು ಅಧ್ಯಯನ ಪೋಷಕರ ಸಭೆ ಮಾದರಿ ಪ್ರಶ್ನೆ ಪತ್ರಿಕೆಗಳು ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕೆ ಕುರಿತು ಚರ್ಚಿಸಲಾಗುತ್ತದೆ. ಫಲಿತಾಂಶ ಉತ್ತಮ ಪಡಿಸಲು ಪೋಷಕರ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಎಂದು ಹಿರಿಯ ಶಿಕ್ಷಕ ರಾಜಣ್ಣ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.