ಚಿಕ್ಕಬಳ್ಳಾಪುರ: ರಸ್ತೆ ವಿಸ್ತರಣೆಗೆ ಜಾಗ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ನ್ಯಾಯಾಲಯವು ಆದೇಶಿಸಿದೆ.

ಈ ಅಂಗವಾಗಿ ಬುಧವಾರ ವರ್ತಕರು ನ್ಯಾಯಾಲಯದ ಸಿಬ್ಬಂದಿ ಜೊತೆಗೆ ಬಂದು ಎಸಿ ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್ ಗಳು ಮತ್ತಿತರ ವಸ್ತುಗಳನ್ನು ಹೊರಗೆ ಇಟ್ಟರು.
.ಕೋಲಾರ–ಚಿಕ್ಕಬಳ್ಳಾಪುರ DCC ಬ್ಯಾಂಕ್: ₹9.87 ಕೋಟಿ ಗುಳುಂ; ವಸೂಲಿ ₹1.84 ಕೋಟಿ!.
2006ರಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಯಾಲಯದ ಬಳಿಯಿಂದ ನ್ಯಾಷನಲ್ ಕಾಲೇಜುವರೆಗಿನ ಡಿ.ವಿ.ಜಿ ರಸ್ತೆಯನ್ನು 100 ಅಡಿ ವಿಸ್ತರಿಸಲಾಗಿತ್ತು.

ಸುಮಾರು 390 ಅಂಗಡಿಗಳು ಇಲ್ಲಿ ಇದ್ದವು. ಆಗ ಪರಿಹಾರ ರೂಪದಲ್ಲಿ ಚದುರ ಅಡಿಗೆ ₹ 280 ನಿಗದಿಪಡಿಸಿ ಮಾಲೀಕರಿಗೆ ನೀಡಲಾಗಿದೆ. ಆದರೆ ಈ ಪೈಕಿ 32 ವರ್ತಕರು ಈ ಪರಿಹಾರದ ಹಣ ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ₹ ಚದುರ ಅಡಿಗೆ ₹ 850 ನಿಗದಿಪಡಿಸಿತ್ತು.

ಈ ಹಣವನ್ನೂ ನೀಡಿಲ್ಲ ಎಂದು ಒಂಬತ್ತು ವರ್ತಕರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಉಪವಿಭಾಗಧಿಕಾರಿ ಅವರ ಸರ್ಕಾರಿ ವಾಹನ ಸಮೇತ ಚರಾಸ್ತಿಯನ್ನು ಜಪ್ತಿ ಮಾಡಲು ನಗರದ ಹಿರಿಯ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಕುರ್ಚಿಗಳು, ಮೇಜು, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
.ಚಿಕ್ಕಬಳ್ಳಾಪುರ: ಚೇಳೂರಿನಲ್ಲೊಂದು ಅಂದದ ಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.