ಸಾದಲಿ: ಮಕ್ಕಳ ದಿನಾಚರಣೆ ಪ್ರಯುಕ್ತ ಇಲ್ಲಿನ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳನ್ನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಕರೆಸಿಕೊಂಡು ಪ್ರಬಂಧ ಸ್ಪರ್ಧೆ ಮತ್ತು ಕಾನೂನು ಅರಿವು ಮೂಡಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಿಎಸ್ಐ ಶ್ಯಾಮಲ ವಿನೋದ್ ಮಾತನಾಡಿ, ‘ಹದಿನೆಂಟು ವರ್ಷದೊಳಗಿನ ಯಾವುದೇ ಹೆಣ್ಣುಮಗುವನ್ನು ವಿವಾಹ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇಂಥ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮಾದಕ ದ್ರವ್ಯ, ಬಾಲ್ಯ ವಿವಾಹ ಮತ್ತು ಅಪ್ರಾಪ್ತ ವಯಸ್ಕರಲ್ಲಿ ವಾಹನ ಚಾಲನೆ ಕುರಿತು ಶಾಲಾ ಮಕ್ಕಳೊಂದಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು. ಜೊತೆಗೆ ಪೊಲೀಸ್ ಠಾಣೆಯ ಕಾರ್ಯ ನಿರ್ವಹಣೆ ಬಗ್ಗೆ ತಿಳಿವಳಿಕೆ ನೀಡಲಾಯಿತು.

‘ಮಕ್ಕಳೇ ನಿಮ್ಮನ್ನು ಯಾರೇ ಹಿಂಬಾಲಿಸಿಕೊಂಡು ಬರುವುದಾಗಲೀ, ನಿಮ್ಮ ಮೈ ಮುಟ್ಟುವುದಾಗಲೀ ಅಥವಾ ಬ್ಯಾಗ್ ಮುಟ್ಟುವುದಾಗಲೀ, ಮೊಬೈಲ್ನಲ್ಲಿ ಬ್ಲೂ ಸಿನಿಮಾ ತೋರಿಸುವುದು ಕಂಡುಬಂದರೆ, ಆ ಬಗ್ಗೆ ನಿಮ್ಮ ಪೋಷಕರಿಗೆ ತಿಳಿಸಿ. ಇಲ್ಲವಾದಲ್ಲಿ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಈ ವೇಳೆ ಎಎಸ್ಐ ಅನಂತ್ ಕುಮಾರ್, ನಾಗರಾಜು, ಕೃಷ್ಣ, ಸಂತೋಷ್, ನರಸಿಂಹಯ್ಯ, ದಿಲೀಪ್ ಕುಮಾರ್, ಶ್ರೀನಾಥ್, ವಸಂತ್ ಕುಮಾರ್, ಶಶಿಕುಮಾರ್, ಕವಿತಾ, ಸುಮಾ, ಅಂಜಿಮ ಕೃಷ್ಣ, ಗೌತಮ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.