ಗುಡಿಬಂಡೆ: ಹೆದ್ದಾರಿಯಲ್ಲಿ ಓಡಾಡುವ ಕೆಂಪು ಬಸ್ಗಳು ಗುಡಿಬಂಡೆಯತ್ತ ಮುಖಮಾಡುತ್ತಿಲ್ಲ. ತಾಲ್ಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶಕ್ಕೆ ಕೆಎಸ್ಆರ್ಟಿಸಿ ಬಸ್ಗಳು ಬಾರದೆ ಜನ ಪರದಾಡುವಂತಾಗಿದೆ.

ಡಾ.ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎನಿಸಿಕೊಂಡಿರುವ ಗುಡಿಬಂಡೆ ತಾಲ್ಲೂಕು ಬೆಂಗಳೂರಿಗೆ 90, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 56 ಕಿ.ಮೀ. ದೂರದಲ್ಲಿದೆ. ಆದರೂ ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸುವ ಬಸ್ಗಳನ್ನು ನಿಯೋಜಿಸದೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಗುಡಿಬಂಡೆ ಹೆಸರಿನಲ್ಲಿ ಪರವಾನಿಗೆ ಪಡೆದು ಅನ್ಯ ಸ್ಥಳಗಳಿಗೆ ಮೀಸಲಾಗಿ ಹೆದ್ದಾರಿಯಲ್ಲಿ ಮಾತ್ರವೇ ಕೆಎಸ್ಆರ್ಟಿಸಿ ಬಸ್ಗಳು ದಿನನಿತ್ಯ ಓಡಾಡುತ್ತಿವೆ. ಇದರಿಂದ ತಾಲ್ಲೂಕು ಕೇಂದ್ರದಿಂದ ಹೊರಡಬೇಕಾದ ಹಾಗೂ ಬರಬೇಕಾದ ಪ್ರಯಾಣಿಕರಿಗೆ ಬಸ್ ಸಿಗುತ್ತಿಲ್ಲ. ಇರುವ ಮೂರು ಬಸ್ಗಳು ಸರಿಯಾದ ಸಮಯಕ್ಕೆ ಬಾರದೆ ಜನ ದಿನವಿಡಿ ಕಾದು ಕಾದು ಸುಸ್ತಾಗಿ ಸಾರಿಗೆ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಪ್ರವಾಸಿತಾಣ, ಐತಿಹಾಸಿಕ ಮಹತ್ವ ಹೊಂದಿರುವ ಗುಡಿಬಂಡೆಗೆ ವಾರಾಂತ್ಯದಲ್ಲಿ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಸ್ವಂತ ವಾಹನ ಹೊಂದಿರುವವರು ಇಲ್ಲಿಗೆ ಬರಲು ಆರಾಮ ಆಗಿ ಬರುಬಹುದಾಗಿದೆ. ಆದರೆ ಸಾರಿಗೆ ನೆಚ್ಚಿಕೊಂಡವರು ಬಸ್ಗಾಗಿ ಕಾಯುವಿಕೆ ಮತ್ತು ಬಸ್ನಲ್ಲೇ ಪ್ರವಾಸ ಸಮಯವನ್ನು ಕಳೆಯುವಂತಾಗಿದೆ.

ನೆರೆಯ ಡಿಪೊ ಮೂಲಕ ಗುಡಿಬಂಡೆ ಹೆಸರಿನಲ್ಲಿ ಪರವಾನಿಗೆ ಪಡೆದು ಮಂಜೂರಾತಿ ಹೊಂದಿರುವ ಬಸ್ಗಳನ್ನು ಬೇರೆ ಮಾರ್ಗಕ್ಕೆ ನಿಯೋಜಿಸಲಾಗುತ್ತಿದೆ. ಯಾವುದೇ ಕಾರಣ ನೀಡದೆ ಬಸ್ ಸಂಚಾರ ರದ್ದು ಪಡಿಸಿ ಅಥವಾ ಹಠಾತ್ ಮಾರ್ಗಸೂಚಿ ಬದಲಿಸಿ ಬೇರೆಡೆಗೆ ಕಳುಹಿಸುವ ಆದೇಶಗಳನ್ನು ಸಾರಿಗೆ ಅಧಿಕಾರಿಗಳು ಹೊರಡಿಸುತ್ತಿದ್ದಾರೆ. ಈ ಮೂಲಕ ಇಲ್ಲಿನ ಜನಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಾರಿಗೆ ಸೌಲಭ್ಯ ಸಂರಕ್ಷಣಾ ವೇದಿಕೆ ಸಂಚಾಲಕ ಜಿ.ವಿ.ಗಂಗಪ್ಪ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರಿಗೆ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ರದ್ದಾದ ಮಾರ್ಗ ಬಸ್ಗಳು

ಅಂತರರಾಜ್ಯ ಪರವಾನಿಗೆ ಪಡೆದ ಮಾರ್ಗಸಂಖ್ಯೆಯ ನಾಲ್ಕು ಬಸ್ ಪೈಕಿ ತುಮಕೂರು ಪುಟ್ಟಪರ್ತಿ( 80181) ಮಾತ್ರ ಸಂಚರಿಸುತ್ತಿದ್ದು ಉಳಿದಂತೆ ಬೆಂಗಳೂರು ಹಿಂದೂಪುರ –ಗುಡಿಬಂಡೆ(18119) ಗುಡಿಬಂಡೆಗೆ ಬರುತ್ತಿಲ್ಲ. ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತದೆ. ಗೌರಿಬಿದನೂರು ತಿರುಪತಿ–ಗುಡಿಬಂಡೆ ಮಾರ್ಗದಲ್ಲಿ ಎರಡು ಬಸ್ ನಿಯೋಜಿಸಲಾಗಿದ್ದು ಒಂದು ಮಾತ್ರ ಆಗಾಗ್ಗೆ ಸಂಚರಿಸುತ್ತಿದೆ. ಕೊರೊನಾ ನೆಪದಲ್ಲಿ ನಿಲ್ಲಿಸಲಾದ ಬಸ್ ಸಂಚಾರವನ್ನು ಮತ್ತೆ ಆರಂಭಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.