ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯ ಬೈಲಾಂಜನೇಯ ದೇವಾಲಯದ ಮುಂದೆ ರಾಜಸ್ಥಾನದ ಮೂಲದ ಸಿಹಿ ತಿನಿಸಿನ ವ್ಯಾಪಾರಿ ವಾಗಾರಾಂ ಅವರು ಸಿದ್ಧಪಡಿಸುವ ಜಿಲೇಬಿ ಪಟ್ಟಣ ಹಾಗೂ ಗ್ರಾಮೀಣ ಜನರ ಮನೆಮಾತಾಗಿದೆ.

ಮೂಲತಃ ರಾಜಸ್ಥಾನದ ವಾಗಾರಾಂ, ಪತ್ನಿ ಸಮೇತ 2001ರಲ್ಲಿ ಪಟ್ಟಣಕ್ಕೆ ವಲಸೆ ಬಂದಿದ್ದಾರೆ. ರಾಜಸ್ಥಾನದ ರಾಜ್ಯದ ಗ್ವಾಲೂರು ಗ್ರಾಮದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅಂಗಡಿ ಮಾಲೀಕರು ಜಿಲೇಬಿ ಮಾಡುವ ಶೈಲಿಯನ್ನು ವಾಗಾರಾಂ ಕಲಿತಿದ್ದಾರೆ. ಪಟ್ಟಣಕ್ಕೆ ಬಂದ ವಾಗಾರಾಂ 5 ವರ್ಷಗಳ ಕಾಲ ತಳ್ಳುವ ಬಂಡಿಯಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದರು. ಇದೀಗ ಪಟ್ಟಣದ ಬೈಲಾಂಜನೇಯ ದೇವಾಲಯದ ಪಕ್ಕದ ಅಂಗಡಿಯಲ್ಲಿ ಜಿಲೇಬಿ ಮಾರಾಟ ಮಾಡುತ್ತಿದ್ದಾರೆ.

ಗುಣಮಟ್ಟ, ರುಚಿ, ಶುಚಿಯಾದ ಕಾರಣಕ್ಕೆ ಕಡಿಮೆ ಬೆಲೆಯಲ್ಲಿ ಸಿಗುವ ಜಿಲೇಬಿ ಪ್ರತಿ ದಿನ 10 ಕೆ.ಜಿಯಷ್ಟು ವಾಗಾರಾಂ ಹಾಗೂ ಪುತ್ರ ಕಿರಣ್‍ಕುಮಾರ್ ಮಾರಾಟ ಮಾಡುತ್ತಿದ್ದಾರೆ. ಅಂಗಡಿಯಲ್ಲಿ ಕೆಲವರು ತಿಂದು ಕುಟುಂಬ ಸದಸ್ಯರಿಗೆಲ್ಲಾ ತೆಗೆದುಕೊಂಡು ಹೋಗುತ್ತಾರೆ.

ಜಿಲೇಬಿ ಜೊತೆಗೆ ಈರುಳ್ಳಿ ಪಕೋಡಾ, ಪಾನಿಪೂರಿ, ಮಸಾಲೆಪೂರಿ, ಬೇಲ್‍ಪೂರಿ, ದೇಲ್ ಪೂರಿಯಂತಹ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಸಿ ಬಿಸಿಯಾದ ಜಿಲೇಬಿ ಖರೀದಿ ಮಾಡಲು ಗ್ರಾಹಕರು ಕಾಯುತ್ತಾರೆ. ಸಿಹಿ ತಿಂದ ಮೇಲೆ ಖಾರ ತಿನ್ನಲು ಜಿಲೇಬಿ ಜೊತೆಗೆ ಈರುಳ್ಳಿ ಪಕೋಡಾ ಸೇವಿಸುತ್ತಾರೆ.

‘ಜಿಲೇಬಿ ಮಾರಾಟ ಹೆಚ್ಚಾಗಿದೆ. ಗ್ರಾಹಕರು ಸಿಹಿ ತಿನ್ನಲು ಬರುತ್ತಾರೆ. ಕುಟುಂಬ ಸದಸ್ಯರಿಗೆ ತಿನ್ನಿಸಲು ಜಿಲೇಬಿ ತೆಗೆದುಕೊಂಡು ಹೋಗುತ್ತಾರೆ. ಪ್ರತಿದಿನ ಪ್ರತಿ ಕೆ.ಜಿಗೆ ₹200ರಂತೆ, 10 ಕೆ.ಜಿ ಯಷ್ಟು ಜಿಲೇಬಿ ಮಾರಾಟ ಮಾಡುತ್ತೇನೆ. ಜಿಲೇಬಿಯ ಜೊತೆಗೆ ಪಕೋಡಾ, ಪಾನಿಪೂರಿ, ಮಸಾಲೆಪೂರಿಯಂತಹ ತಿನಿಸುಗಳ ಮಾರಾಟದಿಂದ ಲಾಭ ಗಳಿಸಿದ್ದೇನೆ’ ಎಂದು ಜಿಲೇಬಿ ವ್ಯಾಪಾರಿ ವಾಗಾರಾಂ ತಿಳಿಸಿದರು.

‘ಸ್ಥಳದಲ್ಲಿಯೇ ಸಿದ್ಧಪಡಿಸುವ ಬಿಸಿ ಬಿಸಿಯಾದ ಜಿಲೇಬಿ ಜನರ ಬಾಯಲ್ಲಿ ನೀರಿಸುತ್ತದೆ. ಜಿಲೇಬಿ ಜೊತೆಗೆ ಪಕೋಡಾ, ಪಾನಿಪೂರಿ, ಮಸಾಲೆಪೂರಿಯಂತಹ ತಿಂಡಿತಿನಿಸುಗಳು ಇಷ್ಟ ಆಗುತ್ತಿದೆ’ ಎಂದು ಪಟ್ಟಣದ ನಿವಾಸಿ ಗೋಪಾಲರೆಡ್ಡಿ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.