ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದವೊಂದರಲ್ಲಿ ಹಾಲಿನ ಶೇಖರಣೆ ಮಾಡುತ್ತಿರುವುದು
ಉತ್ಪಾದಕರಿಗೆ ಪ್ರೋತ್ಸಾಹಧನ ಬಾಕಿ ಉಳಿಸಿಕೊಳ್ಳದೆ ಪ್ರತಿ ತಿಂಗಳು ನೀಡಬೇಕು. ಹಸುಗಳಿಗೆ ಬರುವ ಸಣ್ಣಪುಟ್ಟ ಕಾಯಿಲೆಗೆ ಔಷಧಿ ನೀಡಿ ಆರೈಕೆ ಮಾಡಲು ರೈತರಿಗೆ ತರಬೇತಿ ನೀಡಬೇಕು. ಪ್ರಥಮ ಚಿಕಿತ್ಸಾ ಕಿಟ್ ನೀಡಬೇಕು
ವಿಶ್ವನಾಥ್ ಹಾಲು ಉತ್ಪಾದಕ
ಸೌಲಭ್ಯ ನೀಡಿದ್ದರಿಂದ ಹಾಲಿನ ಉತ್ಪಾದನೆ ಹೆಚ್ಚಳ
ಕಳೆದ ವರ್ಷಕ್ಕಿಂತ ಲೀಟರ್‌ಗೆ ₹5 ಹೆಚ್ಚಾಗಿದೆ. ಬೇಸಿಗೆಯಲ್ಲೇ ಜೋಳದ ಬೀಜ ವಿತರಿಸಿದ್ದರಿಂದ ಹಸಿರುಮೇವು ಹೆಚ್ಚಿ ಉತ್ಪಾದನೆ ಆಯಿತು. ಒಕ್ಕೂಟದಿಂದ ಉತ್ಪಾದಕರಿಗೆ ಹಾಲು ಕರೆಯುವ ಯಂತ್ರ ಮೇವು ಕಟಾವು ಯಂತ್ರ ಹಸು ಮತ್ತು ಉತ್ಪಾದಕರಿಗೂ ಶೇ 50ರಷ್ಟು ಸಬ್ಸಿಡಿಯಲ್ಲಿ ವಿಮೆ ಮತ್ತಿತರ ಸೌಲಭ್ಯ ನೀಡಿದ್ದರಿಂದ ಹಾಲಿನ ಉತ್ಪಾದನೆ ಹೆಚ್ಚಳ ಸಾಧ್ಯವಾಗಿದೆ ಎಂದು ಚಿಂತಾಮಣಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಿ.ಎಂ.ಮಹೇಶ್ ಹೇಳಿದರು.