ಚಿಕ್ಕಬಳ್ಳಾಪುರ: ಕೋವಿಡ್ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಬಗ್ಗೆ ತನಿಖೆ ಆಗುತ್ತಿದೆ. ಚಾಣಕ್ಯ ಮಾಡಿರುವ ಭ್ರಷ್ಟಾಚಾರವನ್ನು ನಾವು ಬಹಳ ಬುದ್ಧಿವಂತಿಕೆಯಿಂದ ತನಿಖೆ ಮಾಡಬೇಕು. ಇವರ ಬಹಳಷ್ಟು ಭ್ರಷ್ಟಾಚಾರಗಳು ಹೊರಗೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಸ್ಕ್ ಸೇರಿದಂತೆ ಕೋವಿಡ್ ಸಮಯದಲ್ಲಿ ಯಾವ ಯಾವ ವಸ್ತುಗಳನ್ನು ಯಾವ ಬೆಲೆಗೆ ಖರೀದಿಸಿದ್ದರು. ಅದರ ನೈಜ ಬೆಲೆ ಎಷ್ಟು ಎನ್ನುವ ಮಾಹಿತಿಗಳು ಮತ್ತು ಕೋವಿಡ್ ಭ್ರಷ್ಟಾಚಾರ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದರು.

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ಈ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ಯಾವ ರೀತಿ ಇದೆ, ಇವರ ಆಡಳಿತದಲ್ಲಿ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು ಎನ್ನುವ ಬಗ್ಗೆ ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದರು.

ಯೋಜನೆಗಳಿಂದ ಜೇಬು ತುಂಬಿಸಿಕೊಳ್ಳುವ ಹವ್ಯಾಸ ನನ್ನದಲ್ಲ. ಸಂಸದರದ್ದು ಎಲ್ಲ ಯೋಜನೆಗಳಲ್ಲಿಯೂ ಜೇಬು ತುಂಬಿಸಿಕೊಳ್ಳುವ ಆಲೋಚನೆ ಎಂದು ಟೀಕಿಸಿದರು.

‘ನಾನು ತಂದ ಯೋಜನೆಗಳಿಗೆ ಕಾಂಗ್ರೆಸ್ನವರು ಹೆಸರು ಹಾಕಿಸಿಕೊಳ್ಳುತ್ತಿದ್ದಾರೆ’ ಎನ್ನುವ ಡಾ.ಕೆ.ಸುಧಾಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ‘ಕ್ಷುಲ್ಲಕ ರಾಜಕೀಯವನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಅನುದಾನ ತೆಗೆದುಕೊಂಡ ಬಾರಪ್ಪ. ನೀನು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಕಾಮಗಾರಿಗಳಿಗೆ ನಿನ್ನ ಬೋರ್ಡ್ ಹಾಕಿಸಿಕೊಳ್ಳಬಹುದಿತ್ತು ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.