ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಪ್ರಸಕ್ತ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ ಮಾಡಿದೆ. ಬಹುವರ್ಷಗಳ ಬೇಡಿಕೆ ಈಡೇರಿರುವುದು ಸಂತಸ ತಂದಿದ್ದರೂ, ಶೇ 50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದಡಿ ಹಂಚಿಕೆ ಮಾಡುತ್ತಿರುವುದು ವಿದ್ಯಾರ್ಥಿ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ ಈವರೆಗೆ ಇಂತಹ ಪದ್ಧತಿ ಇರಲಿಲ್ಲ. ಈ ವರ್ಷ ಚಿಂತಾಮಣಿಯಲ್ಲಿ ಆರಂಭವಾಗಿರುವ ವಿಶ್ವವಿದ್ಯಾಲಯದ ಘಟಕ ಕಾಲೇಜು ಹಾಗೂ ದಾವಣಗೆರೆಯ ಯುಬಿಡಿಟಿ ಕಾಲೇಜುಗಳಲ್ಲಿ ಮಾತ್ರ ಶೇ 50 ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದ ಅಡಿ ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಕಾಲೇಜುಗಳಲ್ಲಿ ₹42,866 ಶುಲ್ಕವಿದೆ. ಪೇಮೆಂಟ್ ಕೋಟಾದಡಿ ₹97,500 ಶುಲ್ಕ ವಿಧಿಸಲಾಗುತ್ತಿದೆ. ₹1.15 ಲಕ್ಷ ಶುಲ್ಕ ಭರಿಸಿದರೆ ಉತ್ತಮ ಖಾಸಗಿ ಕಾಲೇಜುಗಳಲ್ಲಿ ಪೇಮೆಂಟ್ ಕೋಟಾದಡಿ ಸೀಟು ದೊರೆಯುತ್ತವೆ. ಇವು ಹೊಸ ಕಾಲೇಜುಗಳು. ಕಟ್ಟಡವಿಲ್ಲ, ಬೋಧಕರ ನೇಮಕವಾಗಿಲ್ಲ, ಪ್ರಯೋಗಾಲಯಗಳು ಸಮರ್ಪಕವಾಗಿ ಲಭ್ಯವಿರುವುದಿಲ್ಲ. ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭಗೊಂಡಿದೆ.

ಶೈಕ್ಷಣಿಕ ಸೌಲಭ್ಯಗಳಿಲ್ಲದ ಸರ್ಕಾರಿ ಕಾಲೇಜಿನಲ್ಲಿ ಏಕೆ ಪೇಮೆಂಟ್ ಕೋಟಾ ಅಡಿ ಸೀಟು ಪಡೆಯಬೇಕು. ₹18 ಸಾವಿರ ಹೆಚ್ಚು ನೀಡಿದರೆ ಉತ್ತಮ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು ಎಂದು ಪೇಮೆಂಟ್ ಕೋಟಾ ಅಡಿ ದಾಖಲಾಗಲು ವಿದ್ಯಾರ್ಥಿಗಳು ಹಿಂಜರಿಯುತ್ತಾರೆ.

ಸರ್ಕಾರಿ ಕಾಲೇಜಿನಲ್ಲಿ ಹೆಚ್ಚುವರಿ ಶುಲ್ಕ ಏಕೆ ನೀಡಬೇಕು? ಇದುವರೆಗೆ ಇಲ್ಲದ ಪದ್ಧತಿ ಈಗೇಕೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶ್ನಿಸುತ್ತಿದ್ದಾರೆ.

‘ಇದರಲ್ಲಿ ನಮ್ಮದೇನೂ ಪಾತ್ರ ಇಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ(ಕೆಇಎ) ಸೀಟು ಹಂಚಿಕೆಯಾಗಿ ಬಂದ ಅಭ್ಯರ್ಥಿಗಳಿಗೆ ಪ್ರವೇಶ ನೀಡುವುದು ನಮ್ಮ ಕೆಲಸ. ಶುಲ್ಕ ಪದ್ಧತಿ ಸರ್ಕಾರಿ ನಿಯಮ’ ಎನ್ನುತ್ತಾರೆ ಪ್ರಾಂಶುಪಾಲರು.

ನಗರದ ಎಂಜಿನಿಯರಿಂಗ್ ಕಾಲೇಜನ್ನು ಈ ವರ್ಷದ ಸಿಇಟಿ ಕೌನ್ಸಲಿಂಗ್ನ ಸೀಟ್ ಮ್ಯಾಟ್ರಿಕ್ಸ್ಗೆ ಸೇರಿಸಲಾಗಿದೆ. ವಿದ್ಯಾರ್ಥಿಗಳು ಕೌನ್ಸಿಲಿಂಗ್ನಲ್ಲಿ ಸೀಟು ಆಯ್ಕೆ ಮಾಡಿಕೊಂಡು ದಾಖಲಾಗುತ್ತಿದ್ದಾರೆ. ಸರ್ಕಾರಿ ಶುಲ್ಕದ ಕೋಟಾ ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ.

ಚಿಂತಾಮಣಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ಕೋರ್ಸ್ಗೆ ಮಂಜೂರಾತಿ ಸಿಕ್ಕಿದೆ. ಕಂಪ್ಯೂಟರ್ ಸೈನ್ಸ್ (ಸಿಎಸ್ಇ), ಕಂಪ್ಯೂಟರ್ ಸೈನ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ (ಸಿಎಸ್ಇ– ಎಐಎಂಎಲ್), ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ (ಇ ಆ್ಯಂಡ್ ಸಿ), ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ (ಇಇಇ) ವಿಭಾಗಗಳಿಗೆ ದಾಖಲಾತಿಗೆ ಅನುಮತಿ ದೊರೆತಿದೆ. ತಲಾ 60 ಸೀಟುಗಳಂತೆ 240 ಮಂದಿಗೆ ಅವಕಾಶವಿದೆ.

ಅದರಲ್ಲಿ ಶೇ 50 ರಷ್ಟು ಸೀಟುಗಳಿಗೆ (120) ₹42,866 ಶುಲ್ಕ, ಉಳಿದ 120 ಸೀಟುಗಳಿಗೆ ₹97,500 ಶುಲ್ಕವಿದೆ. ಪೇಮೆಂಟ್ ಸೀಟು ದಾಖಲಾತಿಗೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಇದುವರೆಗೆ 120 ಸೀಟು ಮಾತ್ರ ಭರ್ತಿಯಾಗಿವೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮುದ್ದೇನಹಳ್ಳಿ ಕಾಲೇಜಿನ ಶಿವಮೂರ್ತಿ ಎಂಬುವವರನ್ನು ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದೆ. ಪ್ರಸಕ್ತ ಸಾಲಿನ ಕೌನ್ಸೆಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡು ಬಂದಿರುವ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದ್ದು, ಪ್ರಥಮ ವರ್ಷದ ತರಗತಿ ಇನ್ನಷ್ಟೇ ಆರಂಭವಾಗಬೇಕಿದೆ.

ಶುಲ್ಕದ ನೀತಿ: ನಮಗೆ ಸಂಬಂಧವಿಲ್ಲ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜನ್ನು ಆರಂಭಿಸಲಾಗಿದ್ದು ದಾಖಲಾತಿ ನಡೆಯುತ್ತಿದೆ. ಶುಲ್ಕದ ನೀತಿ ನಿಯಮ ನಮಗೆ ಸಂಬಂಧವಿಲ್ಲ. ಸರ್ಕಾರದ ಆದೇಶದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆಯಾಗಿ ಬಂದಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಸೂಚನೆಯಂತೆ ಸಿದ್ಧತೆ ಭರದಿಂದ ನಡೆಸಲಾಗುತ್ತಿದೆ. ಸಿಇಟಿ ಕೌನ್ಸಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡು ಬರುವ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳು ವಿದ್ಯಾರ್ಥಿನಿಲಯ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಭಾರಿ ಪ್ರಾಂಶುಪಾಲ ಜಿ.ಶಿವಮೂರ್ತಿ ಹೇಳಿದರು. ಹೊಸ ಪದ್ಧತಿ ಶುಲ್ಕ ನೀತಿ ಖಂಡನೀಯ ಎಂಜಿನಿಯರಿಂಗ್ ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ ಸರ್ಕಾರ ಹೊಸ ಪದ್ಧತಿಯ ಶುಲ್ಕ ನೀತಿ ಖಂಡನೀಯ. ಸರ್ಕಾರಿ ಮತ್ತು ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಸರ್ಕಾರಿ ಶುಲ್ಕದಲ್ಲಿ ಮಾತ್ರ ಸೀಟು ಹಂಚಿಕೆ ಮಾಡಬೇಕು ಎಂದು ವಿದ್ಯಾರ್ಥಿ ಮುಖಂಡ ರಮೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.