ಶಿಡ್ಲಘಟ್ಟ: ನಗರದ ಎಆರ್ಎಂ ಪಿಯು ಕಾಲೇಜಿನಲ್ಲಿ ಮಂಗಳವಾರ ಕಸಾಪ ವತಿಯಿಂದ ಜ್ಞಾನಪೀಠ ಪ್ರಶಸ್ತಿಪುರಸ್ಕೃತರ ಕುರಿತು ಪ್ರಬಂಧ ಸ್ಪರ್ಧೆನಡೆಸಲಾಯಿತು. ಜತೆಗೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ವಿತರಿಸಲಾಯಿತು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ, ‘ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ’ ಎಂದರು.

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿ ಭಾರತದ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಉಲ್ಲೇಖವಾದ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿ ರಚಿಸಿದ ಭಾರತೀಯನಿಗೆ ಸಲ್ಲುತ್ತದೆ ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮುಕ್ತಿ ಬಿ.ಎಂ (ಪ್ರಥಮ), ಮಾನಸ ಡಿ.ಎಸ್ (ದ್ವಿತೀಯ), ಗೋವರ್ಧನ ಜಿ (ತೃತೀಯ), ಪ್ರಥಮ ವರ್ಷದ ಇಬಿಎಸಿ ವಿಭಾಗದ ಗಜಲಕ್ಷ್ಮಿ (ಪ್ರಥಮ), ಕವನ ಎಂ (ದ್ವಿತೀಯ), ಮಮತ ಎನ್(ತೃತೀಯ) ಅವರಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಲಾಯಿತು.

ಶಾರದಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಎಆರ್ಎಂ ಪಿಯು ಕಾಲೇಜು ಪ್ರಾಂಶುಪಾಲ ಕೆ. ಮೂರ್ತಿ ಸಾಮ್ರಾಟ್, ಕಲಾ ವಿಭಾಗದ ಮುಖ್ಯಸ್ಥ ವಿ. ದೇವರಾಜ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಸಿ. ನಾಗೇಶ್, ಉಪನ್ಯಾಸಕ ರವಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.