ಮೂಡಿಗೆರೆ: ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಘಟ್ಟದಹಳ್ಳಿ ಬಳಿ ಭಾನುವಾರ ಮಧ್ಯಾಹ್ನ ಕೆಎಸ್ಆರ್ ಟಿಸಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 22 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬೇಲೂರಿನಿಂದ ಗೆಂಡೆಹಳ್ಳಿ ಮಾರ್ಗವಾಗಿ ಮೂಡಿಗೆರೆಗೆ ಬರುತ್ತಿದ್ದ ಒಂದು ಬಸ್ ಹಾಗೂ ಮೂಡಿಗೆರೆಯಿಂದ ಬೇಲೂರಿಗೆ ತೆರಳುತ್ತಿದ್ದ ಮತ್ತೊಂದು ಬಸ್ ನಡುವೆ ರಾಜ್ಯ ಹೆದ್ದಾರಿಯ ಘಟ್ಟದಹಳ್ಳಿ ತಿರುವಿನ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಿರುವಿನಲ್ಲಿ ರಸ್ತೆ ಕಿರಿದಾಗಿರುವುದರಿಂದ ಎದುರಿನಿಂದ ಬಂದ ಬಸ್ಗೆ ಜಾಗ ಬಿಡಲಾಗದೆ ಅಪಘಾತ ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದರೆ, ವೇಗವಾಗಿ ಬಂದ ಬಸ್ ಎದುರಿನಿಂದ ಬಂದ ಬಸ್ಗೆ ಜಾಗ ಬಿಡಲಾಗದೆ ಅಪಘಾತ ಸಂಭವಿಸಿತು ಎಂದು ಆಸ್ಪತ್ರೆಯಲ್ಲಿ ದಾಖಲಾದ ಪ್ರಯಾಣಿಕರು ಹೇಳಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ಖಾಸಗಿ ವಾಹನಗಳಲ್ಲಿ, ಆ್ಯಂಬ್ಯುಲೆನ್ಸ್ಗಳಲ್ಲಿ ಗಾಯಾಳುಗಳನ್ನು ಎಂಜಿಎಂ ಆಸ್ಪತ್ರೆಗೆ ಸಾಗಿಸಿ ದಾಖಲಿಸಿದರು. ಗಾಯಗೊಂಡವರಲ್ಲಿ ಇಬ್ಬರು ಚಾಲಕರು ಹಾಗೂ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.