ಚಿಕ್ಕಮಗಳೂರು: ಕುಡಿಯುವ ನೀರು ಪೂರೈಸಲು ಗ್ರಾಮ ಪಂಚಾಯಿತಿ ಬೋರ್ವೆಲ್, ಕಾಂಕ್ರಿಟ್ ರಸ್ತೆ, ವಿದ್ಯುತ್ ಪರಿವರ್ತಕ ಅಳವಡಿಕೆ ಮಾಡಿರುವ ಜಾಗವನ್ನೂ ಸೇರಿಸಿ ಕಂದಾಯ ಇಲಾಖೆ ಅಧಿಕಾರಿಗಳು ವ್ಯಕ್ತಿಯೊಬ್ಬರಿಗೆ ಮಂಜೂರು ಮಾಡಿದ್ದು, ಕಡೂರು ತಾಲ್ಲೂಕಿನ ಗಾಂಧಿನಗರದ ನಿವಾಸಿಗಳು ಕುಡಿಯುವ ನೀರಿಗೆ ತೊಂದರೆ ಎದುರಾಗುವ ಆತಂಕದಲ್ಲಿದ್ದಾರೆ.

ಕಡೂರು ತಾಲ್ಲೂಕಿನ ನಾಗರಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿ ನಗರದಲ್ಲಿ 60 ಕುಟುಂಬಗಳಿವೆ. ಇಲ್ಲಿಗೆ ಕುಡಿಯುವ ನೀರು ಪೂರೈಸಲು ಸರ್ಕಾರಿ ಗೋಮಾಳ ಜಾಗದಲ್ಲಿ 15 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿತ್ತು. ಅದರ ಮೂಲಕವೇ ಕುಡಿಯುವ ನೀರನ್ನು ಗಾಂಧಿ ನಗರಕ್ಕೆ ಪೂರೈಸಲಾಗುತ್ತಿತ್ತು.

ನಿರಂತರ ಜ್ಯೋತಿ ಪೂರೈಕೆಯ ವಿದ್ಯುತ್ ಪರಿವರ್ತಕ ಕೂಡ ಪಕ್ಕದಲ್ಲೇ ಇದ್ದು, ನಿರಂತರಾಗಿ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಜಮೀನು ಹೊಂದಿರುವ ವ್ಯಕ್ತಿಯೊಬ್ಬರಿಗೆ ಈ ಜಾಗವನ್ನೂ ಸೇರಿಸಿ ಕಂದಾಯ ಇಲಾಖೆ ಮಂಜೂರು ಮಾಡಿದೆ. ಗ್ರಾಮದ ಕೊನೆಯ ಬೀದಿಗೆ ಇರುವ ರಸ್ತೆ, ವಿದ್ಯುತ್ ಪರಿವರ್ತಕ ಕೂಡ ಅದರಲ್ಲೇ ಸೇರಿಕೊಂಡಿದೆ. ಕೊಳವೆ ಬಾವಿ ಖಾಸಗಿ ಜಮೀನಿಗೆ ಸೇರಿಕೊಂಡಿದ್ದು, ಅದರಲ್ಲಿ ನೀರು ಪಡೆಯಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ.

ಕೊಳವೆ ಬಾವಿಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಕೊರೆಯಲಾಗಿದೆ. ದುರಸ್ತಿ ಸೇರಿ ನಿರ್ವಹಣೆಯನ್ನೂ ಪಂಚಾಯಿತಿಯಿಂದಲೇ ಈವರೆಗೆ ಮಾಡಲಾಗಿದೆ. ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನೂ ಪಾವತಿಸುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

ಕೊಳವೆ ಬಾವಿ ದುರಸ್ತಿಪಡಿಸಿ ಗ್ರಾಮಕ್ಕೆ ನಿರಂತರವಾಗಿ ಕುಡಿಯುವ ನೀರು ಪೂರೈಸಬೇಕಿದೆ. ಆದರೆ, ಅದಕ್ಕೆ ವ್ಯಕ್ತಿ ಅವಕಾಶ ನೀಡುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲೇ ಕುಳಿತು ಭೂಮಿ ಮಂಜೂರು ಮಾಡಿದ್ದಾರೆ. 1952ರ ತನಕ 5 ಎಕರೆ 25 ಗುಂಟೆ ಇದ್ದ ಜಾಗವನ್ನು 2022ರಲ್ಲಿ ಎಂ.ಆರ್. ನಂಬರ್ ಬದಲಿಸಿ 6 ಎಕರೆ 35 ಗುಂಟೆಯಾಗಿ ವ್ಯಕ್ತಿಯ ಹೆಸರಿಗೆ ಪಹಣಿ ಮಾಡಿದ್ದಾರೆ’ ಎಂದು ಗ್ರಾಮದ ಮಂಜನಾಯಕ್ ಆರೋಪಿಸಿದರು.

‘ತಮ್ಮ ಹೆಸರಿಗೆ ಖಾತೆಯಾದ ಬಳಿಕ ಕೊಳವೆ ಬಾವಿಯಿಂದ ನೀರು ಪಡೆಯಲು ಅವಕಾಶ ನೀಡುತ್ತಿಲ್ಲ. ಅಕ್ರಮ ಭೂಮಂಜೂರಾತಿಯನ್ನು ವಾಪಸ್ ಪಡೆದು ನ್ಯಾಯ ಒದಗಿಸಬೇಕು’ ಎಂದು ಅವರು ಮನವಿ ಮಾಡಿದರು.

‘ಕೊಳವೆ ಬಾವಿ ತಮ್ಮದೇ ಎಂದು ವ್ಯಕ್ತಿ ಹೇಳುತ್ತಿದ್ದು, ಪೈಪ್ ಮತ್ತು ಮೋಟರ್ ಹೊರ ತೆಗೆದು ದೌರ್ಜನ್ಯ ಮಾಡಿದ್ದಾರೆ. ಸರ್ಕಾರಿ ಆಸ್ತಿ ನಾಶ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದಾರೆ. ಅದರಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಗೂ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಮಂಜನಾಯಕ್ ಹೇಳಿದರು.

ತೆರವಿಗೆ ಕಾನೂನು ಪ್ರಕಾರ ಕ್ರಮ

ಗೋಮಾಳ ಜಾಗದಲ್ಲಿ ಕೊಳವೆ ಬಾವಿ ಕೊರೆದು ನೀರು ಪೂರೈಸಲಾಗುತ್ತಿತ್ತು. ಈಗ ಕೆಟ್ಟಿರುವ ಕೊಳವೆ ಬಾವಿ ದುರಸ್ತಿಗೆ ಖಾಸಗಿ ವ್ಯಕ್ತಿ ಅವಕಾಶ ನೀಡುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ತಿಳಿಸಿದರು. ‘ತೆರವುಗೊಳಿಸಲು ಪೊಲೀಸರೊಂದಿಗೆ ಒಮ್ಮೆ ಸ್ಥಳಕ್ಕೆ ಹೋಗಿ ಪ್ರಯತ್ನ ಕೂಡ ಮಾಡಿದ್ದೆವು. ಜಗಳ ನಡೆದಿದ್ದರಿಂದ ಸಾಧ್ಯವಾಗಿಲ್ಲ. ಒತ್ತುವರಿ ತೆರವು ನಿಯಮಗಳ ಪ್ರಕಾರ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಬೇರೆ ಕೊಳವೆ ಬಾವಿಯಿಂದ ಊರಿನ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.