ಕೊಪ್ಪ: ಪಟ್ಟಣದ ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಭಾಗ್ಯವನ್ನು ಎದುರು ನೋಡುತ್ತಿದೆ.

60 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದಿವೆ. ₹12 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ 2020ರಲ್ಲಿ ಕೇಂದ್ರದಿಂದ ಮಂಜೂರಾತಿ ಸಿಕ್ಕಿದ್ದು, 2022ರಲ್ಲಿ ಕಾಮಗಾರಿ ಆರಂಭಿಸಿ ಒಂದು ವರ್ಷದಲ್ಲಿ ಮುಕ್ತಾಯಗೊಳಿಸಲಾಗಿದೆ. ಈ ಹಿಂದೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದ ಡಾ.ಗಾನವಿ ಅವರು ಕಟ್ಟಡವನ್ನು ತಾಲ್ಲೂಕು ಆಸ್ಪತ್ರೆಯ ಸುಪರ್ದಿಗೆ ತೆಗೆದುಕೊಂಡಿದ್ದರು.

ಜಿಲ್ಲಾ ಕೇಂದ್ರದಿಂದ 87 ಕಿ.ಮೀ ದೂರವಿರುವ ಕೊಪ್ಪ ತಾಲ್ಲೂಕು ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿರುವುದರಿಂದ ಕೊಪ್ಪ ಮಾತ್ರವಲ್ಲದೆ, ಶೃಂಗೇರಿ, ಎನ್.ಆರ್.ಪುರ, ಕಳಸ, ಬಾಳೆಹೊನ್ನೂರು, ತೀರ್ಥಹಳ್ಳಿ ತಾಲ್ಲೂಕಿನ ಜನರಿಗೂ ಅನುಕೂಲವಾಗಲಿದೆ. ಇಲ್ಲಿಗೆ ಅಗತ್ಯವಿರುವ 41 ಹುದ್ದೆಗಳ ಪೈಕಿ ಸ್ಥಳಾಂತರಿಸುವ ಹುದ್ದೆ 20, ಹೊಸದಾಗಿ 21 ಹುದ್ದೆ ಸೃಜಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಸ್ತ್ರೀರೋಗ ತಜ್ಞರ 2 ಹುದ್ದೆ, ಮಕ್ಕಳ ತಜ್ಞರ 1 ಹುದ್ದೆ, ಶುಶ್ರೂಷಕರ 12 ಹುದ್ದೆ, ಕಿರಿಯ ಫಾರ್ಮಾಸಿಸ್ಟ್ 1 ಹುದ್ದೆ, ಕಿರಿಯ ಪ್ರಯೋಗಾಲಯ ತಂತ್ರಜ್ಞರು 2 ಹುದ್ದೆ, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ತಲಾ 1 ಹುದ್ದೆ, ಡಾಟಾ ಎಂಟ್ರಿ ಆಪರೇಟರ್ 2 ಹುದ್ದೆ, ಗ್ರೂಫ್ 'ಡಿ' 14, ಸ್ವೀಪರ್ ಅಥವಾ ಗಾರ್ಡ್ 4 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಇಲ್ಲಿನ ಆಸ್ಪತ್ರೆಗೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ 1 ಹುದ್ದೆ, ಅರಿವಳಿಕೆ ತಜ್ಞರ 1 ಹುದ್ದೆ, ಶುಶ್ರೂಷಕರ 6 ಹುದ್ದೆ, ಪ್ರಯೋಗಾಲಯ ತಂತ್ರಜ್ಞರ 1 ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ತಾಲ್ಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 90 ರಿಂದ 110 ಹೆರಿಗೆ ಮಾಡಲಾಗುತ್ತದೆ ಈ ಆಸ್ಪತ್ರೆಯ ಪಕ್ಕದಲ್ಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದೆ. ಇನ್ನಷ್ಟೇ ಇಲ್ಲಿ ವೈದ್ಯಕೀಯ ಸೌಲಭ್ಯ ಆರಂಭಗೊಳ್ಳಬೇಕಿದೆ.

ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಅಗತ್ಯ ಪರಿಕರಗಳು ಇವೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಸದ್ಯದಲ್ಲೇ ಉದ್ಘಾಟನೆ ನಡೆಯಲಿದೆ.
ಡಾ.ಸಂದೀಪ್, ಆಡಳಿತ ವೈದ್ಯಾಧಿಕಾರಿ, ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.