ಮೂಡಿಗೆರೆ: ‘ಬಿಜೆಪಿಯು ಹಿಂದೂ ಧರ್ಮದ ಮುಖವಾಡ ಧರಿಸಿರುವ ಪಕ್ಷವಾಗಿದೆ’ ಎಂದು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಹೇಳಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ದೇಶ ಅಭಿವೃದ್ಧಿ ಪಡಿಸುವ ಪಕ್ಷವಲ್ಲ. ಈ ದೇಶದ ಸಂಪತ್ತನ್ನು ಬಂಡವಾಳ ಶಾಹಿಗಳಿಗೆ ಹಾಗೂ ಹೊರ ದೇಶದ ಕಂಪನಿಗಳಿಗೆ ಮಾರಾಟ ಮಾಡುವ ಪಕ್ಷವಾಗಿದೆ. ಹಿಂದೂ ಧರ್ಮದ ಮುಖವಾಡ ಇಟ್ಟುಕೊಂಡು ರಾಜಕಾರಣ ಮಾಡಿ ಈ ದೇಶದ ಸಂಪತ್ತಿನ ಮೇಲೆ ಕಣ್ಣು ಇಟ್ಟಿದ್ದಾರೆ’ ಎಂದರು.

‘ಈಗಾಗಲೇ ನಮ್ಮ ಕೈಯಲ್ಲಿದ್ದ ನವರತ್ನಗಳನ್ನು ಖಾಸಗೀಕರಣ ಮಾಡಿ ಆಗಿದೆ. ಈಗ ರಾಜ್ಯದಲ್ಲಿ ಬಿಜೆಪಿ ಬಲವಾಗಿದೆ ಎಂಬ ಕಾರಣಕ್ಕೆ ಅದನ್ನೇ ಬಂಡವಾಳ ಮಾಡಿಕೊಂಡು ಹಿಂದೂ ಧರ್ಮದ ಹೆಸರಿನಲ್ಲಿ ಮತ ಪಡೆದು ಗೆಲುವು ಸಾಧಿಸಿ ಅರಣ್ಯ ಸಂಪತ್ತನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ. ಈ ಬಾರಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದಕ್ಷಿಣ ಭಾರತದ ಅರಣ್ಯ, ನೈಸರ್ಗಿಕ ಸಂಪನ್ಮೂಲ ಉಳಿಯುವುದಿಲ್ಲ. ಆದ್ದರಿಂದ ದೇಶದ ಸಂಪತ್ತು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಭಾರತೀಯರ ಕರ್ತವ್ಯವಾಗಿದೆ’ ಎಂದು ಹೇಳಿದರು.

ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆಯದಿದ್ದರೆ ಜನ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವುದಂತೂ ಸತ್ಯ. ನಮ್ಮ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಸ್ಪರ್ಧಿಸಿದ್ದು ಜನರ ಸಂಕಷ್ಟ ನಿವಾರಿಸಲು ಜನರು ಅವರನ್ನು ಬೆಂಬಲಿಸಬೇಕು
ಸಾತಿ ಸುಂದರೇಶ್, ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ

ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ‘ಮೋದಿ ಅವರು ಡಬಲ್ ಎಂಜಿನ್ ಸರ್ಕಾರ ಇದ್ದರೆ ವೇಗವಾಗಿ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಿರುವ ಅಂಶವನ್ನು ಜನರು ಗಮನಿಸಲೇಬೇಕು. ಅಗತ್ಯ ವಸ್ತುಗಳ ಬೆಲೆ ಡಬಲ್ ಮಾಡಿರುವುದನ್ನೇ ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದರೆ ಬೆಲೆ ಏರಿಕೆ ಡಬಲ್ ಅಲ್ಲ ತ್ರಿಬಲ್ ಆಗಿದೆ’ ಎಂದರು.

ಸಿಪಿಐ ರಾಜ್ಯ ಮುಖಂಡ ಡಾ. ಸಿದ್ದಣ್ಣಗೌಡ ಪಾಟೀಲ್, ಪಿ.ವಿ ಲೋಕೇಶ್, ರಾಧಾ ಸುಂದರೇಶ್, ಬಿ.ಕೆ ಲಕ್ಷ್ಮಣ್ಕುಮಾರ್, ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.