ಕಳಸ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳ ಸತತ ಮಳೆಯಿಂದ ಭದ್ರಾ ನದಿಯ ಒಡಲು ಭರ್ತಿ ಆಗಿದೆ.

ಮಂಗಳವಾರದಿಂದ ಕಳಸದಲ್ಲಿ ಕ್ರಮವಾಗಿ 2.4 ಸೆಂ.ಮೀ., 3.3 ಸೆಂ.ಮೀ. 11 ಸೆಂ.ಮೀ., 4.5 ಸೆಂ.ಮೀ., ಶನಿವಾರ 6 ಸೆಂ.ಮೀ, ಭಾನುವಾರ ಬೆಳಿಗ್ಗೆವರೆಗೆ 12 ಸೆಂ.ಮೀ ಮಳೆ ಆಗಿದೆ. ಸಂಸೆ, ಕುದುರೆಮುಖ ಪ್ರದೇಶದಲ್ಲಿ ಇದಕ್ಕಿಂತ ಹೆಚ್ಚು ಮಳೆ ಆಗಿದೆ.

ಎಲ್ಲ ಹಳ್ಳಗಳು, ಸೋಮಾವತಿ ನದಿ ತುಂಬಿದೆ. ಪರಿಣಾಮವಾಗಿ ಭದ್ರಾ ನದಿಯು ವರ್ಷದ ಅತ್ಯಂತ ಗರಿಷ್ಠ ಮಟ್ಟದಲ್ಲಿ ಹರಿಯುತ್ತಿದೆ.

ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯ ಸೇತುವೆ ಮೇಲೆ ದಿನವಿಡೀ ಹರಿಯಿತು. ಇದರಿಂದ ಹೊರನಾಡು, ಕಳಸಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರಿಗೆ ತೊಂದರೆ ಎದುರಾಯಿತು.

ಕಳಸ-ಕುದುರೆಮುಖ ರಸ್ತೆಯ ನೆಲ್ಲಿಬೀಡು ಸೇತುವೆ ಮೇಲೆ ನೀರು ಹರಿದಿದ್ದರಿಂದ ಕಾರ್ಕಳ, ಮಂಗಳೂರು ಸಂಚಾರಕ್ಕೆ ಅಡಚಣೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.