ಕೊಟ್ಟಿಗೆಹಾರ: ಆರು ದಶಕಗಳಿಂದ ದೇಶದ ಸೈನಿಕರಿಗಾಗಿ, ರಕ್ಷಣಾ ಸಚಿವಾಲಯ ಖಾತೆಗೆ ನಿರಂತರವಾಗಿ ಹಣ ಕಳುಹಿಸುತ್ತಿರುವ ದೇಶ ಭಕ್ತ ನರಸಿಂಹರಾವ್ ಹೆಬ್ಬಾರ್.

86 ವರ್ಷದ ಹೆಬ್ಬಾರ್ ಪಾದರಸದಂತೆ ಚುರುಕು. ಮೂಡಿಗೆರೆ ತಾಲ್ಲೂಕಿನ ಕೂವೆಯ ಮಾವಿನಕಟ್ಟೆ ನಿವಾಸಿ. ಕೊಟ್ಟಿಗೆಹಾರ, ಬಾಳೆಹೊನ್ನೂರು ಮತ್ತಿತರ ಕಡೆ ವೀಳ್ಯದೆಲೆ ವ್ಯಾಪಾರ ಮಾಡುತ್ತಾರೆ. ಯಕ್ಷಗಾನ ಕಲಾವಿದರೂ ಹೌದು. ಯುವಕನಿದ್ದಾಗ ಅವರಿಗೆ ಸೇನೆಗೆ ಸೇರಬೇಕೆನ್ನುವ ಆಸೆ ಇತ್ತು. ಆದರೆ, ಮಾರ್ಗದರ್ಶನದ ಕೊರತೆಯಿಂದ ಅವಕಾಶ ಲಭಿಸಲಿಲ್ಲ. ಅಪ್ಪಟ ದೇಶಭಕ್ತರಾದ ಅವರು ವಾರದಲ್ಲಿ ಒಂದು ದಿನ ಉಪವಾಸ ಮಾಡಿ, ಆ ಮೊತ್ತವನ್ನು ಕೂಡಿಟ್ಟು, ವರ್ಷಕ್ಕೆ ₹5 ಸಾವಿರದಂತೆ ರಕ್ಷಣಾ ಸಚಿವಾಲಯದ ಖಾತೆಗೆ ಕಳುಹಿಸುತ್ತಾರೆ.

ಯೋಧರೆಂದರೆ ಹೆಬ್ಬಾರ್ ಅವರಿಗೆ ಅಪಾರ ಪ್ರೀತಿ. ಹಿಂದೆ ದೇಶದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ಒಂದು ದಿನ ಉಪವಾಸ ಇದ್ದು ರಕ್ಷಣಾ ನಿಧಿಗೆ ಹಣ ಕಳುಹಿಸಿ ಎಂದು ಮನವಿ ಮಾಡಿದ್ದರು. ಆ ಮಾತಿನಿಂದ ಪ್ರೇರಿತರಾದ
ಹೆಬ್ಬಾರ್, ಅಂದಿನಿಂದ ಇಂದಿನವರೆಗೂ ಚಾಚೂ ತಪ್ಪದೆ ತಮ್ಮ ದುಡಿಮೆಯ ಒಂದು ಭಾಗವನ್ನು ದೇಶದ ರಕ್ಷಣೆಗೆ ಕೊಡುಗೆಯಾಗಿ
ನೀಡುತ್ತಿದ್ದಾರೆ.

ಹೆಬ್ಬಾರ್ ಯಕ್ಷಗಾನ ಕಲಾವಿದರಾಗಿದ್ದು ಸ್ಥಳೀಯ ಯಕ್ಷಗಾನ ಕಲಾವಿದರಿಗೂ, ವಿವಿಧ ಸಂಸ್ಥೆಗಳಿಗೂ ತಮ್ಮಿಂದಾದ ನೆರವು ನೀಡಿದ್ದಾರೆ. ‘ತಾವು ಕೊಡುವ ಹಣ ಉತ್ತಮ ಕೆಲಸಗಳಿಗೆ ಬಳಕೆಯಾಗಲಿ’ ಎನ್ನುವುದಷ್ಟೇ ಅವರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.