ಚಿಕ್ಕಮಗಳೂರು: ನಗರಸಭೆ ಚುನಾವಣೆ ಮತದಾನವು ಶಾಂತಿಯುತವಾಗಿ ನಡೆಯಿತು. ಶೇ 60.74 ಮತದಾನವಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು, ಬೇರೆ ವಾರ್ಡ್ ಪಟ್ಟಿಯಲ್ಲಿ ಹೆಸರು ಇರುವುದು ಇಂಥ ಗೊಂದಲಗಳನ್ನು ಹೊರತುಪಡಿಸಿ ಮತದಾನ ಸುಗಮವಾಗಿ ನಡೆದಿದೆ.

ವಾಗ್ವಾದ: ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಕೆಲವರು ಸಿಬ್ಬಂದಿ ಜತೆ ಕೆಲವೆಡೆ ವಾಗ್ವಾದ ನಡೆಸಿದರು.ವಾರ್ಡ್ ಸಂಖ್ಯೆ 4, 5 , 10 ಸಹಿತ ಇತರ ಕೆಲ ವಾರ್ಡ್‌ಗಳಲ್ಲಿ ಈ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು, ಬೇರೆ ವಾರ್ಡ್ ಪಟ್ಟಿಯಲ್ಲಿ ಹೆಸರು ಇರುವುದು ಇಂಥ ಗೊಂದಲ ಕಂಡುಬಂದವು ಎಂದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೊಂದಲವಾಗಿದ್ದ ಕಡೆಗೆ ತೆರಳಿ ಪರಿಹರಿಸಲಾಯಿತು. ಎಲ್ಲ ಕಡೆ ಶಾಂತಿಯುತವಾಗಿ ಮತದಾನ ನಡೆದಿದೆ’ ಎಂದು ತಹಶೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಧ್ಯಾಹ್ನ ಚುರುಕು: ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಿತು. ಮತದಾನ ಬೆಳಿಗ್ಗೆ ತುಸು ನಿಧಾನಗತಿಯಲ್ಲಿ ಇತ್ತು. ಮಧ್ಯಾಹ್ನದ ಹೊತ್ತಿಗೆ ಚುರುಕುಗೊಂಡಿತ್ತು.

ಬೆಳಿಗ್ಗೆ 9 ಗಂಟೆಗೆ ಶೇ 9.40, 11 ಗಂಟೆಗೆ ಶೇ 20.68, ಮಧ್ಯಾಹ್ನ 1 ಗಂಟೆಗೆ ಶೇ 35.51, 3 ಗಂಟೆಗೆ ಶೇ 47.05 ಹಾಗೂ ಸಂಜೆ 5 ಗಂಟೆಗೆ ಶೇ 60.99 ಮತದಾನವಾಯಿತು.

ಅಭ್ಯರ್ಥಿಗಳು, ಅವರ ಕಡೆಯವರು, ಪಕ್ಷಗಳ ಮುಖಂಡರು ಮತದಾನ ಕೇಂದ್ರಗಳಿಂದ ಅನತಿ ದೂರದಲ್ಲಿ ನಿಂತಿದ್ದರು. ಮತದಾರರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು, ಕ್ರಮ ಸಂಖ್ಯೆ ಮಾಹಿತಿ ನೀಡಿದರು.
ಹಲವು ಕಡೆ ಶಾಮಿಯಾನ, ಕುರ್ಚಿ, ಮೇಜು ವ್ಯವಸ್ಥೆ ಮಾಡಿಕೊಂಡಿದ್ದರು. ಬಿರುಬಿಸಿಲು ಲೆಕ್ಕಿಸದೆ ಸಂಜೆವರೆಗೂ ಠಿಕಾಣಿ ಹೂಡಿದ್ದರು.

ಮತದಾನ ಕೇಂದ್ರಗಳ ಬಳಿ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರು ಜಮಾಯಿಸಿದ್ದರು. ಕೆಲವರು ನೀರು, ತಂಪು ಪಾನೀಯ ಉಪಾಹಾರದ ವ್ಯವಸ್ಥೆ ಮಾಡಿದ್ದರು.

ನೆರವು: ವೃದ್ಧರಿಗೆ, ಆಶಕ್ತರಿಗೆ ಮತದಾನ ಕೇಂದ್ರಕ್ಕೆ ತೆರಳಲು ಅವರ ಸಂಬಂಧಿಕರು, ಕಾರ್ಯಕರ್ತರು ನೆರವಾದರು. ಮನೆಯಿಂದ ವಾಹನದಲ್ಲಿ ಮತದಾನ ಕೇಂದ್ರಕ್ಕೆ ಕರೆ ತಂದರು. ಅಲ್ಲಿಂದ ಕೈಹಿಡಿದು ಮತಗಟ್ಟೆವರೆಗೆ ತಲುಪಿಸಲು ನೆರವಾದರು.

30ರಂದು ಮತ ಎಣಿಕೆ: ನಗರಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದೆ. ಮತಗಳ ಎಣಿಕೆ ಡಿ.30ರಂದು ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.