ಶೃಂಗೇರಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ತಾಲ್ಲೂಕಿನ ಹೆದ್ದಾರಿಯಷ್ಟೆ ಪರಿಶೀಲನೆ ನಡೆಸಿದ್ದು, ಬೇರೆ ಹಾನಿ ವೀಕ್ಷಿಸಲಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಕಡೆಮನೆ ಬಳಿಯ ಧರೆ ಕುಸಿತ, ತೂಗು ಸೇತುವೆ ವೀಕ್ಷಣೆ ಮಾಡಿದ ಸಚಿವರು, ಅಲ್ಲಿಂದ ಸ್ವಲ್ಪ ದೂರದಲ್ಲಿ ನೆಲಸಮವಾದ ಮನೆಗಳನ್ನು ವೀಕ್ಷಿಸಲಿಲ್ಲ ಎಂದು ನಿವಾಸಿಗಳಾದ ತಮ್ಮಣ್ಣ, ರಜನಿ, ಗೋಪಾಲ ಮತ್ತು ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

‘ಸಚಿವರು ನೆಮ್ಮಾರಿಗೆ ಹೋಗುವ ಮಾರ್ಗದಲ್ಲಿ ಬೋಳುಗುಡ್ಡೆ ಎಂಬಲ್ಲಿ 12 ಮನೆಗಳು ಹಾನಿಯಾಗಿದ್ದು, ಹೆದ್ದಾರಿ ಬದಿ ಮಣ್ಣು ತೆಗೆದಿದ್ದರಿಂದ ಈ ಹಾನಿಯಾಗಿದೆ. ಈ ಪ್ರದೇಶಕ್ಕೆ ಸಚಿವರು ವೀಕ್ಷಣೆ ಮಾಡದಿರುವುದು ನಿವಾಸಿಗಳಿಗೆ ಬೇಸರ ತರಿಸಿದೆ. ರಸ್ತೆಯಿಂದ ತಡೆಗೋಡೆ ನಿರ್ಮಿಸಿ 12 ಮನೆಗಳನ್ನು ರಕ್ಷಿಸಬೇಕು. ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರನ್ನು ಕರೆದೊಯ್ಯದಿದ್ದರೆ ಏಕೆ ಬರಬೇಕು. ಸಮಸ್ಯೆ ಬಗೆಹರಿಯುವುದು ಹೇಗೆ’ ಎಂಬುದು ಬೋಳುಗುಡ್ಡೆ ನಿವಾಸಿಗಳಾದ ರೇವಂತ್, ಆಶೋಕ್, ಶ್ರೀನಿವಾಸ್, ಶರತ್, ರಘು ಅವರ ಪ್ರಶ್ನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಟಿ.ಡಿ.ರಾಜೇಗೌಡ, ‘ಕಳೆದ ಬಾರಿ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ ಮತ್ತು ಸೇತುವೆಗಳನ್ನು ಹೊಸದಾಗಿ ನಿರ್ಮಿಸಿದ್ದೇವೆ. ಈ ವರ್ಷ ತಾಲ್ಲೂಕಿನಲ್ಲಿ ಕಳೆದ 10 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನ ಕಾಲ ಕಳೆದಿದ್ದಾರೆ. 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿವೆ. ಗ್ರಾಮೀಣ ಭಾಗದಲ್ಲಿ ಅಡಿಕೆ ತೋಟ, ಗದ್ದೆಗಳಿಗೂ ಹಾನಿಯಾಗಿದೆ’ ಎಂದರು.

‘ಜಿಲ್ಲೆಯನ್ನು ಅತಿವೃಷ್ಠಿ ಪ್ರದೇಶ ಎಂದು ಘೋಷಿಸಲು, ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ನೀಡಲು, ಹಾನಿಯಾದ ರಸ್ತೆ ಅಭಿವೃದ್ಧಿಪಡಿಸಲು ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಸೇರಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಜಿಲ್ಲಾಧಿಕಾರಿ ಅವರಿಂದ ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ನಿಯೋಗ ತೆರಳಿ ಸರ್ಕಾರದಿಂದ ಸೂಕ್ತ ನೆರವು ಕೇಳುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.