ಮೂಡಿಗೆರೆ: ಗರ್ಭಿಣಿಯೊಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಆಕೆ ಆ್ಯಂಬುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕೂವೆ ಗ್ರಾಮದ ಗಬ್ಬಲಗೋಡಿನಲ್ಲಿ ನಡೆದಿದೆ.

ಜಾರ್ಖಾಂಡ್ನ ಗುಮ್ಲಾ ಜಿಲ್ಲೆಯ ಜರಕತ್ವಾ ಗ್ರಾಮದ ಮಂಗ್ರಿ ಉರಾನ್ ಹಾಗೂ ಪ್ರಭಾತ್ ಉರಾನ್ ದಂಪತಿ ಕೂವೆ ಗ್ರಾಮದ ಗಬ್ಬಲಗೋಡು ಬಳಿ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗ್ರಿ ಉರಾನ್ಗೆ ಗುರುವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ.

ಚಾಲಕ ತೀರ್ಥಕುಮಾರ್ ಹಾಗೂ ಸಿಬ್ಬಂದಿ ಸಂತೋಷ್ ಕುಮಾರ್ ಸ್ಥಳಕ್ಕೆ ಮಂಗ್ರಿ ಉರಾನ್ ಅವರನ್ನು ಕರೆದೊಯ್ಯುವ ವೇಳೆ ಹೆರಿಗೆ ನೋವು ತೀವ್ರವಾಗಿದೆ. ಕೂಡಲೇ ರಸ್ತೆ ಬದಿಯಲ್ಲಿ ಆಂಬುಲೆನ್ಸ್ ನಿಲ್ಲಿಸಿದ್ದು, ಮಂಗ್ರಿ ಅವರು ಮಗುವಿಗೆ ಜನ್ಮ ನೀಡಿದರು. ತಾಯಿ–ಮಗು ಆರೋಗ್ಯವಾಗಿದ್ದು, ಆ್ಯಂಬುಲೆನ್ಸ್ ಸಿಬ್ಬಂದಿ ತಾಯಿ– ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.