ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಇಲ್ಲ ಬೆಳಕಿನ ಭಾಗ್ಯ: ಹೆಚ್ಚಿದ ಅಪಘಾತ

ರಘು ಕೆ.ಜಿ
Published : 21 ಡಿಸೆಂಬರ್ 2023, 7:00 IST
Last Updated : 21 ಡಿಸೆಂಬರ್ 2023, 7:00 IST
ಫಾಲೋ ಮಾಡಿ
Comments
ನಗರದ ಕತ್ರಿಮಾರಮ್ಮ ದೇವಾಲಯದ ಬಳಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸಿರುವುದು  
ನಗರದ ಕತ್ರಿಮಾರಮ್ಮ ದೇವಾಲಯದ ಬಳಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸಿರುವುದು  
ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಸೂಕ್ತ ಜಾಗ ಗುರುತಿಸಿ ಲಾರಿ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಯಾವುದೇ ಕ್ರಮವಾಗಿಲ್ಲ
ಜಿ.ಕೆ.ಶಿವಾನಂದ್ ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ
ಸಂಚಾರ ನಿಯಮ ಪಾಲನೆ ಪ್ರತಿ ಸವಾರನ ಜವಾಬ್ದಾರಿ. ಉಲ್ಲಂಘನೆಯಾದಾಗ ಅಪಘಾತಗಳು ಹೆಚ್ಚಾಗಲಿವೆ. ಕೆ.ಎಂ. ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಅವಿನಾಶ್‌ಗೌಡ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ನಗರ ಸಂಚಾರ ಠಾಣೆ
ಕೆಲ ಲಾರಿಗಳಿಗೆ ಹೆದ್ದಾರಿಯೇ ನಿಲ್ದಾಣ
ನಗರದಲ್ಲಿ ಲಾರಿಗಳ ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆ ಇದೆ. ಆದ್ದರಿಂದ ಕೆಲ ಲಾರಿ ಮತ್ತಿತರ ವಾಹನಗಳಿಗೆ ದಂಟರಮಕ್ಕಿ ಕೆರೆ ಏರಿ ಹಾಗೂ ಹೆದ್ದಾರಿಯೇ ನಿಲ್ದಾಣವಾಗಿದೆ. ಬೀದಿ ದೀಪಗಳಿಲ್ಲದೆ ಅತಿ ವೇಗವಾಗಿ ಬರುವ ವಾಹನಗಳು ಕೆಲವೊಮ್ಮೆ ರಾತ್ರಿ ರಸ್ತೆ ಬದಿಯಲ್ಲಿ ವಾಹನಗಳಿಗೆ ಡಿಕ್ಕಿಯಾಗುವ ಸಾಧ್ಯತೆಯೂ ಇದೆ. ಬೇಲೂರು– ಹಿರೇಮಗಳೂರು ಸಂಪರ್ಕ ರಸ್ತೆಯಲ್ಲಿಯೂ ಇದೇ ಸ್ಥಿತಿ ಇದ್ದು ವರ್ಷದಲ್ಲಿ 17 ಅಪಘಾತ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಒಟ್ಟು 600 ಲಾರಿಗಳಿದ್ದು ದಂಟರಮಕ್ಕಿ ಬಳಿ 150 ಲಾರಿಗಳ ನಿಲ್ದಾಣಕ್ಕೆ ಮಾತ್ರ ಅವಕಾಶವಿದೆ. ಉಳಿದ ಲಾರಿಗಳು ರಸ್ತೆಯಲ್ಲೇ ನಿಲ್ಲಬೇಕಿದೆ ಎನ್ನುತ್ತಾರೆ ಲಾರಿ ಮಾಲೀಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT