ಆಲ್ದೂರು: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮೀಪದ ಹೊಸಳ್ಳಿ ಗ್ರಾಮದ ಅಂಗವಿಕಲ ಗಂಗಮ್ಮ ಅವರಿಗೆ ₹1ಲಕ್ಷ 50 ಸಾವಿರ ಮೌಲ್ಯದ ವೀಲ್ಚೇರ್ ಅನ್ನು ಬುಧವಾರ ವಿತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಡಿಗೆರೆ ತಾಲ್ಲೂಕಿನ ಯೋಜನಾಧಿಕಾರಿ ಶಿವಾನಂದ.ಪಿ ಮಾತನಾಡಿ, ‘ತಾಲ್ಲೂಕಿನಾದ್ಯಂತ ಇದುವರೆಗೂ ನೂರಕ್ಕೂ ಹೆಚ್ಚು ವೀಲ್ಚೇರ್, ವಾಟರ್ ಬೆಡ್, ವಾಕರ್ ಪರಿಕರಗಳನ್ನು ಒದಗಿಸಲಾಗಿದ್ದು, ಅವಶ್ಯಕತೆ ಇರುವ ಅಭ್ಯರ್ಥಿಗಳಿಗೆ ಯೋಜನೆಯ ಮೂಲಕ ಪರಿಕರಗಳನ್ನು ಒದಗಿಸಲಾಗುವುದು’ ಎಂದರು.

ವಲಯ ಮೇಲ್ವಿಚಾರಕಿ ಲಲಿತ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರವೀಣ್ ಪೂಜಾರಿ, ಸೇವಾ ಪ್ರತಿನಿಧಿ ನೇತ್ರಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.