ನಾಯಕನಹಟ್ಟಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯು ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಇಲ್ಲಿನ ಪಟ್ಟಣ ಪಂಚಾಯಿತಿಯು 16 ಸದಸ್ಯ ಬಲವನ್ನು ಹೊಂದಿದೆ. 8 ಜನ ಬಿಜೆಪಿ ಸದಸ್ಯರು, 7 ಜನ ಕಾಂಗ್ರೆಸ್ ಸದಸ್ಯರು, ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ 4ನೇ ವಾರ್ಡಿನ ಪಕ್ಷೇತರ ಸದಸ್ಯೆ ನೀಲಮ್ಮ ಬಿಜೆಪಿಯನ್ನು ಬೆಂಬಲಿಸಿದರು. ಕೆಲವು ದಿನಗಳ ಹಿಂದೆ ಬಿಜೆಪಿಯಲ್ಲಿ ಕೆಲ ಸದಸ್ಯರು ಬಂಡಾಯವೆದ್ದಿದ್ದರು. ಇದನ್ನು ಮನಗಂಡ ಬಿಜೆಪಿ ಹೈಕಮಾಂಡ್ ಬಂಡಾಯ ಶಮನಗೊಳಿಸಿದ್ದರು.

ಚುನಾವಣೆಗೆ ಬಿಜೆಪಿಯ 8 ಜನ ಸದಸ್ಯರ ಜತೆಗೆ ಸಂಸದರಾದ ಎ.ನಾರಾಯಣಸ್ವಾಮಿ ಹಾಜರಿದ್ದರು. ಇದರಲ್ಲಿ 13ನೇ ವಾರ್ಡ್ ಸದಸ್ಯ ಎನ್. ಮಹಾಂತಣ್ಣ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯೆ ಷಗುಪ್ತಾಯಾಸ್ಮಿನ್ ಕೌಸರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದ 7 ಜನ ಸದಸ್ಯರ ಪೈಕಿ 11 ವಾರ್ಡ್ ಸದಸ್ಯ ಜೆ.ಆರ್.ರವಿಕುಮಾರ್ ಅಧ್ಯಕ್ಷ ಸ್ಥಾನಕ್ಕೆ, 12 ವಾರ್ಡ್ ಸದಸ್ಯ ಎನ್.ಐ.ಎಂ.ಡಿ. ಮನ್ಸೂರ್ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದರು.

2ನೇ ವಾರ್ಡ್ ಸದಸ್ಯ ಟಿ. ಬಸಣ್ಣ ಮತ್ತು 9ನೇ ವಾರ್ಡಿನ ಟಿ.ಮಂಜುಳಾ ಸಭೆಯಲ್ಲಿ ಹಾಜರಿದ್ದರು. 6ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಜೆ.ಟಿ.ಎಸ್. ತಿಪ್ಪೇಸ್ವಾಮಿ, 10ನೇ ವಾರ್ಡ್ ಸದಸ್ಯ ಎಸ್. ಉಮಾಪತಿ ಸಭೆಗೆ ಗೈರು ಹಾಜರಾಗಿದ್ದರು.

ಆದರೆ 8ನೇ ವಾರ್ಡ್ ಸದಸ್ಯ ಎಸ್. ಕೃಷ್ಣಮೂರ್ತಿ ಚುನಾವಣೆ ಪ್ರಕ್ರಿಯೆ ಶುರುವಾದಾಗ ಪಟ್ಟಣ ಪಂಚಾಯಿತಿ ಆವರಣಕ್ಕೆ ಬಂದು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ದೂರ ಉಳಿದು ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸಿದರು.

ಅಂತಿಮವಾಗಿ ಚುನಾವಣೆ ನಡೆದು 11ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಜೆ.ಆರ್. ರವಿಕುಮಾರ್ ಮತ್ತು 12 ವಾರ್ಡ್ ಸದಸ್ಯ ಎನ್.ಐ.ಎಂ.ಡಿ. ಮನ್ಸೂರ್ ತಲಾ 4 ಮತಗಳನ್ನು ಪಡೆದರು. 13ನೇ ವಾರ್ಡ್ ಬಿಜೆಪಿ ಸದಸ್ಯ ಎನ್. ಮಹಾಂತಣ್ಣ ಅಧ್ಯಕ್ಷರಾಗಿ ಮತ್ತು 7ನೇ ವಾರ್ಡ್ ಬಿಜೆಪಿ ಸದಸ್ಯೆ ಷಗುಪ್ತಾಯಾಸ್ಮಿನ್ ಕೌಸರ್ ಉಪಾಧ್ಯಕ್ಷೆಯಾಗಿ ತಲಾ 10 ಮತಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾದರು.

ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪ್ರಭಾರ ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜು ಇದ್ದರು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.