ಹೊಳಲ್ಕೆರೆ: ತಾಲ್ಲೂಕಿನ ಕೊಂಡಾಪುರದಲ್ಲಿ ಒತ್ತುವರಿ ಮಾಡಲಾಗಿರುವ ಪರಿಶಿಷ್ಟ ಜಾತಿಯವರ ಸ್ಮಶಾನದ ಜಾಗವನ್ನು ತಕ್ಷಣವೇ ತೆರವು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೊಂಡಾಪುರದ ಗ್ರಾಮದ ಸರ್ವೆ ನಂಬರ್ 22ರಲ್ಲಿರುವ 2.34 ಎಕರೆ ವ್ಯಾಪ್ತಿಯ ಸ್ಮಶಾನದಲ್ಲಿ ದಲಿತರು ಎರಡು ಮೂರು ತಲೆಮಾರುಗಳಿಂದ ಶವಸಂಸ್ಕಾರ ಮಾಡುತ್ತ ಬಂದಿದ್ದಾರೆ. ಆದರೆ ಈಚೆಗೆ ಗ್ರಾಮದ ಶೇಖರಪ್ಪ ಹಾಗೂ ರಾಮಪ್ಪ ಎಂಬವರು ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಇದರಿಂದ ಸಮುದಾಯದ ಜನರಿಗೆ ಶವಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ. ತಾಲ್ಲೂಕು ಆಡಳಿತ ತಕ್ಷಣವೇ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಬೇಕು. ಈ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ತಾಲ್ಲೂಕು ಸಂಚಾಲಕ ಸುಂದರ ಮೂರ್ತಿ, ನವೀನ್ ಮದ್ದೇರು, ಎನ್.ಪ್ರಭಾಕರ, ಎಚ್.ವಿಜಯ್, ಎಚ್.ವಿಜಯ ಕುಮಾರ್, ಮೂರ್ತಪ್ಪ, ದೇವರಾಜ್, ಎಚ್.ಶಿವಮೂರ್ತಿ, ಕರಿಯಣ್ಣ, ರಂಗಪ್ಪ, ಮಂಜುನಾಥ, ನಿಂಗಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.