ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಶಾಲೆಗಳಲ್ಲಿ ಇದ್ದೂ ಇಲ್ಲವಾಗಿವೆ ಶುದ್ಧ ಕುಡಿಯುವ ನೀರಿನ ಘಟಕಗಳು

Published : 18 ನವೆಂಬರ್ 2024, 6:42 IST
Last Updated : 18 ನವೆಂಬರ್ 2024, 6:42 IST
ಫಾಲೋ ಮಾಡಿ
Comments
ಧರ್ಮಪುರ ಸಮೀಪದ ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುವುದು
ಧರ್ಮಪುರ ಸಮೀಪದ ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿರುವುದು
ಮನೆಯಿಂದ ಬಾಟಲಿಯಲ್ಲಿ ನೀರು ತಂದಿರುವ ಚಿಕ್ಕಜಾಜೂರು ಸಮೀಪದ ಹಿರೇಕಂದವಾಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು
ಮನೆಯಿಂದ ಬಾಟಲಿಯಲ್ಲಿ ನೀರು ತಂದಿರುವ ಚಿಕ್ಕಜಾಜೂರು ಸಮೀಪದ ಹಿರೇಕಂದವಾಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು
ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆಗೆ ಹೊರತುಪಡಿಸಿ ಮಕ್ಕಳಿಗೆ ಸರ್ಮಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಸೂಚಿಸಲಾಗುವುದು.
ಎಂ.ಆರ್. ಮಂಜುನಾಥ್‌ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಬಚ್ಚಬೋರನಹಟ್ಟಿ ಗ್ರಾಮದಲ್ಲಿ ನಾಲ್ಕು ವರ್ಷದಿಂದ ಆರ್‌ಓ ಘಟಕ ದುರಸ್ತಿಯಾಗಿಲ್ಲ. ಎಲ್ಲದಕ್ಕೂ ಕೊಳವೆ ಬಾವಿ ನೀರನ್ನು ಆಶ್ರಯಿಸಲಾಗಿದೆ. ಶಾಲೆಗೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ.
ಪಿ.ಬಸವರಾಜ ಪಾಲಕರು
ಊಟದ ನಂತರ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಹಳೆಯ ವಿದ್ಯಾರ್ಥಿಗಳು ಅಥವಾ ಸಂಘ ಸಂಸ್ಥೆಗಳು ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದಲ್ಲಿ ಅನುಕೂಲವಾಗುತ್ತದೆ.
ಆರ್.ಪ್ರಗತಿ ವಿದ್ಯಾರ್ಥಿನಿ ಚಿಕ್ಕಜಾಜೂರು
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರನ್ನು ಒಳಗೊಂಡಂತೆ ಮೂಲಸೌಕರ್ಯ ಕಲ್ಪಿಸಬೇಕು. ಸಕಾಲಕ್ಕೆ ನೀರು ಇಲ್ಲದೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಮೊದಲು ನೀರಿನ ಸೌಲಭ್ಯ ಆದ್ಯತೆ ನೀಡಿ.
ಎಂ.ಅಜ್ಜಯ್ಯ ವಿದ್ಯಾರ್ಥಿ ಚಿಕ್ಕಜಾಜೂರು
ಸರಾಸರಿ 1ರಿಂದ 2 ಲೀಟರ್ ನೀರು ಅವಶ್ಯ
ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಬೇಕು. ಮಕ್ಕಳಿಗೆ ಶುದ್ಧ ನಿರಿನ ಅಗತ್ಯ ಹೆಚ್ಚು. ಇಲ್ಲವಾದರೆ ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಮತ್ತು ನವಜಾತ ಶಿಶು ತಜ್ಞ ಡಾ.ವಿ.ಶ್ರೀನಿವಾಸ್‌. ಮಗುವಿನ ಚಟುವಟಿಕೆ ಕ್ರಿಯಾಶೀಲ ಸಮಯ ಶಾಲೆಯಲ್ಲಿ ಅಧಿಕ. ಈ ಸಮಯದಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. 1 ಕೆ.ಜಿ.ಗೆ 100 ಎಂ.ಎಲ್‌ ಲೆಕ್ಕದಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಇರುತ್ತದೆ. ಅಂದರೆ 10 ಕೆ.ಜಿ. ಮಗುವಿಗೆ ದಿನಕ್ಕೆ 1 ಲೀ. ನೀರಿನ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲೇ ಸರಾಸರಿ 1ರಿಂದ 2 ಲೀಟರ್‌ ನೀರು ಸೇವಿಸಿದರೆ ಸದಾ ಚಟುವಟಿಕೆಯಿಂದಿದ್ದು ಪಾಠ ಕಲಿಯಲು ಸಹಕಾರಿ. ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದರೆ ಅಂದಾಜು 75 ಲೀಟರ್‌ ನೀರಿನ ಅಗತ್ಯವಿರುತ್ತದೆ. ಸಕಾಲಕ್ಕೆ ನೀರು ಸೇವಿಸದಿದ್ದರೆ ಮೂತ್ರಕೋಶ ಹೊಟ್ಟೆ ನೋವು ಜ್ವರದ ಸಮಸ್ಯೆ ಕಾಡಲಿದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಕಿರು ಘಟಕ ಆಳವಡಿಸಿ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಿದರೆ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಅವ ಸಲಹೆ.
ಆರ್‌ಒ ನೀರು ಶಿಕ್ಷಕರಿಗೆ ಮೀಸಲು ವಿ.ವೀರಣ್ಣ
ಧರ್ಮಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆಯಾಗಿದೆ. ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ನೀರಿನಲ್ಲಿ ಟಿಡಿಎಸ್ ಪ್ರಮಾಣ 900ರಿಂದ 1200ವರೆಗೆ ಇದೆ. ಕುಡಿಯುವ ನೀರಿಗಾಗಿ 800ರಿಂದ 1000 ಅಡಿ ಆಳದವರೆಗೂ ಕೊಳವೆ ಬಾವಿ ಕೊರೆಯಿಸಲಾಗಿದ್ದು ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವ ಕಾರಣ ಕುಡಿಯಲು ಯೋಗ್ಯವಾಗಿಲ್ಲ. ಈ ಕಾರಣಕ್ಕೆ ಪ್ರತಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಬೇಕಿದೆ. ಹರಿಯಬ್ಬೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಒಟ್ಟು 241 ವಿದ್ಯಾರ್ಥಿಗಳಿದ್ದು ವರ್ಷದ ಹಿಂದೆ 50 ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ 1 ಲೀಟರ್ ನೀರು ಬೇಕೆಂದರೂ 50 ವಿದ್ಯಾರ್ಥಿಗಳಿಗೆ ಮಾತ್ರ ಸಾಕಾಗುತ್ತದೆ. ಆದರೆ ಈ ನೀರನ್ನು ಶಾಲೆಯಲ್ಲಿ ಬಿಸಿಯೂಟ ತಯಾರಕರು ಮತ್ತು ಶಿಕ್ಷಕರು ಮಾತ್ರ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಕ್ಯಾನ್‌ಗಳಲ್ಲಿ ನೀರು ತರಿಸಲಾಗುತ್ತಿದೆ. ಬೇಸಿಗೆ ವೇಳೆ ವಿದ್ಯಾರ್ಥಿಗಳ ಪರದಾಟ ಹೇಳತೀರದು. ಬಿಸಿಯೂಟ ಸೇವಿಸುವ ಸಂದರ್ಭದಲ್ಲಿ ನೀರು ಕುಡಿಯಲು ವಿದ್ಯಾರ್ಥಿಗಳಿಗೆ ಬಾಟಲಿಗಳೇ ಗತಿ ಎನ್ನುವಂತಾಗಿದೆ.
ಕೊಳವೆಬಾವಿ ನೀರೇ ಆಸರೆ ವಿ.ಧನಂಜಯ
ನಾಯಕನಹಟ್ಟಿ: ಹೋಬಳಿ ವ್ಯಾಪ್ತಿಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ  ವಿದ್ಯಾರ್ಥಿಗಳು ಕೊಳವೆಬಾವಿ ನೀರನ್ನೇ ಸೇವಿಸುವಂತಾಗಿದೆ. ಗ್ರಾಮಗಳಲ್ಲಿ ಲಭ್ಯವಿರುವ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ಶುದ್ಧ ಕುಡಿಯುವ ನೀರಿನ ಮೊರೆ ಹೋಗಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನೀರಿನ ವ್ಯವಸ್ಥೆ ಮರೀಚಿಕೆಯಾಗಿದೆ. ದಾನಿಗಳು ಹಳೆಯ ವಿದ್ಯಾರ್ಥಿಗಳು ಸಂಘ–ಸಂಸ್ಥೆಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದ್ದಾರೆ. ಅವೂ ಕೆಲ ದಿನಗಳ ನಂತರ ದುರಸ್ತಿಗೆ ಬಂದು ನಿರ್ವಹಣೆ ಇಲ್ಲವಾಗಿದೆ. ಹೋಬಳಿಯಲ್ಲಿರುವ 80ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಬಿಸಿಯೂಟ ತಯಾರಿಕೆಗೆ ಕೊಳವೆಬಾವಿ ನೀರನ್ನೇ ಬಳಸಲಾಗುತ್ತಿದೆ. ಕೆಲ ಶಾಲೆಗಳ ಶಿಕ್ಷಕರು ಗ್ರಾಮದಲ್ಲಿ ಸಿಗುವ ಶುದ್ಧ ಕುಡಿಯುವ ನೀರನ್ನು ಕ್ಯಾನ್‍ಗಳಲ್ಲಿ ತಂದು ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮನೆಗಳಿಂದಲೇ ಕುಡಿಯುವ ನೀರನ್ನು ಬಾಟಲ್‍ಗಳಲ್ಲಿ ತರುತ್ತಿದ್ದಾರೆ. ಆದರೆ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಾಲಾ ಆಡಳಿತ ಮಂಡಳಿಯವರು ಪ್ರತಿ ವಿದ್ಯಾರ್ಥಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT