ಉಳ್ಳಾಲ (ದಕ್ಷಿಣ ಕನ್ನಡ) : ಕುತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿಸ್ಥಳಕ್ಕೆ ದರ್ಶನ್ ಸಹಿತ ಹಲವು ನಟರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್, ಮಂಡ್ಯ ಸಂಸದೆ ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ, ಅವರ ಪರ ಪ್ರಚಾರ ಕೈಗೊಳ್ಳುವ ಕುರಿತ ಪ್ರಶ್ನೆಗೆ, 'ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಲಿಕ್ಕಾಗುತ್ತದೆಯೇ' ಎಂದು ಪ್ರತಿಕ್ರಿಯಿಸಿದರು.

'ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ , ಈಗ ಅವರ ಕೈ ಬಿಟ್ಟರೆ ಆಗುತ್ತದೆಯೇ ಸರ್. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ಬು ಬಿಟ್ಟು ಬಿಡುತ್ತೀರಾ. ಸುಮಲತಾ ಅಮ್ಮ ಅಮ್ಮನೇ ಸಾರ್' ಎಂದಿದ್ದಾರೆ.

'ಮಂಗಳೂರಿಗೆ ಸುಮಾರು ಸಲ ಬಂದಿದ್ದೇನೆ. ಆದರೆ ಕುತ್ತಾರಿಗೆ ಬರುವುದಕ್ಕೆ ಆಗಿರಲಿಲ್ಲ. ಈ ಕ್ಷೇತ್ರದ ಬಗ್ಗೆ ಅನೇಕರು ಹೇಳುತ್ತಿದ್ದರು. ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ' ಎಂದರು.

'ಏನು ಪ್ರಾರ್ಥನೆ ಮಾಡಿದಿರಿ' ಎಂಬ ಪ್ರಶ್ನೆಗೆ ತುಸು ಸಿಟ್ಟಾದ ಅವರು, 'ಅದನ್ನು ಹೇಳಿದರೆ ನೀವು ನಡೆಸಿಕೊಡುತ್ತೀರಾ' ಎಂದು ಮರುಪ್ರಶ್ನೆ ಹಾಕಿದರು.

ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ, ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ದೆಕ್ಕಾಡು ಕೊರಗಜ್ಜ ಆದಿಸ್ಥಳದ ಟ್ರಸ್ಟಿಗಳು ಇದ್ದರು.

ರಜಾ ದಿನವಾದ ಭಾನುವಾರ ಕೊರಗಜ್ಜನ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ದರ್ಶನ್ ಜೊತೆ ಸೆಲ್ಫಿ ತೆಗೆಯಲು ಜನ ಮುಗಿಬಿದ್ದರು. ದರ್ಶನ್ ಅವರ ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ನೀಡದೇ, ತಳ್ಳಿದ್ದು ಅಭಿಮಾನಿಗಳಿಗೆ ಮುಜುಗರವನ್ನುಂಟು ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.