ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಎಸ್ಬಿಐ ಶಾಖೆಯಲ್ಲಿ ಮಾಜಿ ಸೈನಿಕರೊಬ್ಬರ ಹಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದ ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡವು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಆರೋಪಿ, ಬೆಳ್ತಂಗಡಿ ತಾಲ್ಲೂಕಿನ ತೆಕ್ಕಿಲ ನಿವಾಸಿ ಮಹಮ್ಮದ್ ಫಾರೂಕ್ ಎಂಬಾತನನ್ನು ಬಂಧಿಸಿ ₹ 80 ಸಾವಿರ ವಶಪಡಿಸಿಕೊಂಡಿದೆ.

ಸೆ.4ರಂದು ಬೆಳಿಗ್ಗೆ ನಿವೃತ್ತ ಸೈನಿಕರೊಬ್ಬರು ಬ್ಯಾಂಕಿನಲ್ಲಿ ಡ್ರಾ ಮಾಡಿ ಟೇಬಲ್ ಮೇಲಿಟ್ಟಿದ್ದ ₹ 80 ಸಾವಿರ ಎಗರಿಸಿ ಪರಾರಿಯಾಗಿದ್ದ.

ಡಿವೈಎಸ್ಪಿ ಎಸ್.ವಿಜಯಪ್ರಸಾದ್ ನೇತೃತ್ವದಲ್ಲಿ ಪಿಎಸ್ಐ ಹರೀಶ್ ಎಂ.ಆರ್, ವಿಶೇಷ ಪತ್ತೆ ದಳದ ಎಚ್.ಸಿ.ಹರಿಶ್ಚಂದ್ರ, ಎಚ್.ಸಿ.ರಾಧಾಕೃಷ್ಣ, ಬಸವರಾಜ ಎಚ್.ಕೆ., ಕುಮಾರ್ ಎಚ್.ಕೆ., ಅಶೋಕ, ರಂಜಾನ್ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.