ಬಂಟ್ವಾಳ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ನಿಧನದ ಪ್ರಯುಕ್ತ ಶನಿವಾರ ‘ಬಂಟ್ವಾಳ ಪ್ರಜಾಧ್ವನಿ ಯಾತ್ರೆ’ಯನ್ನು ರದ್ದುಗೊಳಿಸಲಾಗಿದೆ.

ಪೊಳಲಿ ಸಮೀಪ ಶುಕ್ರವಾರ 14 ದಿನಗಳ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಗಿತ್ತು. ಎರಡನೇ ದಿನದ ಯಾತ್ರೆಯನ್ನು ಇಲ್ಲಿನ ಬ್ರಹ್ಮರಕೂಟ್ಲು ಶ್ರೀರಾಮ ಭಜನಾ ಮಂದಿರ ಬಳಿ ಆರಂಭಿಸಬೇಕಿತ್ತು. ಅದೇ ಸ್ಥಳದಲ್ಲಿ ಒಟ್ಟು ಸೇರಿದ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಪಕ್ಷದ ಮುಖಂಡರಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಪದ್ಮನಾಭ ರೈ, ಸಂಪತ್ ಕುಮಾರ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಲೋಲಾಕ್ಷ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಸ್ಟೀವನ್ ಡಿ'ಸೋಜ, ಆಲ್ಬರ್ಟ್ ಮಿನೇಜಸ್, ಜಗದೀಶ ಕೊಯಿಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.