ಮಂಗಳೂರು: ಬೆಂಗಳೂರಿನ ಸ್ಕೇಟರ್ಗಳು ಇಲ್ಲಿ ಗುರುವಾರ ಆರಂಭಗೊಂಡ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದರು. ಆತಿಥೇಯ ದಕ್ಷಿಣ ಕನ್ನಡದ ಕ್ರೀಡಾಪಟುಗಳು ಕೂಡ ಪದಕ ಗಳಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದರು.

ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯ ರಿಂಕ್ನಲ್ಲಿ ನಡೆದ ಸ್ಪರ್ಧೆಗಳ ಇನ್ಲೈನ್ ಡ್ಯುಯಲ್ ಟಿಟಿಯ ಪುರುಷರ ವಿಭಾಗದಲ್ಲಿ ಹನುಷ್ ಬಾಬು ಚಿನ್ನ ಗಳಿಸಿದರೆ ಮಹಿಳೆಯರ ವಿಭಾಗದಲ್ಲಿ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನ ಪದಕ ವಿಜೇತೆ ಕಲ್ಪನಾ ಕುಟ್ಟಪ್ಪ ಅವರನ್ನು ಹಿಂದಿಕ್ಕಿ ಸ್ಥಳೀಯ ಸ್ಕೇಟರ್ ಡಾಶೆಲ್ ಅಮಾಂಡ ಚಿನ್ನಕ್ಕೆ ಮುತ್ತಿಟ್ಟರು. 1000 ಮೀ ಕ್ವಾಡ್ನ ಪುರುಷ ಮತ್ತು ಮಹಿಳಾ ವಿಭಾಗದ ಚಿನ್ನ ಬೆಂಗಳೂರು ಪಾಲಾಯಿತು.

ಮೊದಲ ದಿನದ ಫಲಿತಾಂಶಗಳು (ಚಿನ್ನ ಮಾತ್ರ): ಇನ್ಲೈನ್: ಡ್ಯುಯಲ್ ಟಿಟಿ: ಪುರುಷರು: ಹನುಷ್ ಬಾಬು (ಬೆಂಗಳೂರು) ಕಾಲ: 17.827 ಸೆ; ಮಹಿಳೆಯರು: ಡಾಶೆಲ್ ಅಮಾಂಡ ಕೊನ್ಸಾಸೊ (ದಕ್ಷಿಣ ಕನ್ನಡ) ಕಾಲ:20.177 ಸೆ; 14ರಿಂದ 17 ವಯೋಮಾನದ ಬಾಲಕರು: ಮಹಮ್ಮದ್ ಶಮೀಲ್ ಅರ್ಷದ್ (ದಕ್ಷಿಣ ಕನ್ನಡ) ಕಾಲ:18.480 ಸೆ; ಬಾಲಕಿಯರು: ಪೂರ್ವಿ ಎಸ್ ಮಟ್ಟಿ (ಬೆಂಗಳೂರು) ಕಾಲ: 20.473ಸೆ; 11ರಿಂದ 14 ವಯೋಮಾನದ ಬಾಲಕರು: ಮಾರುತಿ ನಾಯಕ್ (ಬೆಂಗಳೂರು) ಕಾಲ: 20.18 ಸೆ; ಬಾಲಕಿಯರು: ಶ್ರೀಜಾ ರಾವ್ (ಮೈಸೂರು) ಕಾಲ: 22.00 ಸೆ; ಇನ್ಲೈನ್: 9ರಿಂದ 11 ವರ್ಷದ ಬಾಲಕರು: ಪೂಜಿತ್ ರವಿಕುಮಾರ್ (ಬೆಂಗಳೂರು) ಕಾಲ: 23.63ಸೆ; ಬಾಲಕಿಯರು: ವೀಕ್ಷಾ ಖಂಡೂಲ (ಬೆಂಗಳೂರು) ಕಾಲ: 25.54 ಸೆ; 5ರಿಂದ 7 ವರ್ಷದ ಬಾಲಕರು: ಕರುಣ್ ಕುಮಾರ್ (ಮಂಡ್ಯ) ಕಾಲ: 27.08ಸೆ; ಬಾಲಕಿಯರು: ಶ್ರೇಷ್ಠಾ ಶೆಣೈ (ದಕ್ಷಿಣ ಕನ್ನಡ) ಕಾಲ: 29.63 ಸೆ; 7ರಿಂದ 9 ವರ್ಷದ ಬಾಲಕರು: ಮುಹಮ್ಮದ್ ಅಯಾನ್ (ದಕ್ಷಿಣ ಕನ್ನಡ)–1 ಕಾಲ: 26.594ಸೆ; ಬಾಲಕಿಯರು: ತೃಷಿಣಿ (ಬೆಂಗಳೂರು) ಕಾಲ: 25.77ಸೆ; ಕ್ವಾಡ್: 1000 ಮೀ: ಪುರುಷರು: ರೇವತ್ (ಬೆಂಗಳೂರು) ಕಾಲ: 2ನಿ 5.14 ಸೆ; ಮಹಿಳೆಯರು: ಹರ್ಷಿತಾ (ಬೆಂಗಳೂರು) ಕಾಲ: 2ನಿ 14.11ಸೆ; 14ರಿಂದ 17 ವರ್ಷದ ಬಾಲಕರು: ಮೌರ್ಯ ರೆಡ್ಡಿ (ಬೆಂಗಳೂರು) ಕಾಲ: 1ನಿ 49.52ಸೆ; ಬಾಲಕಿಯರು: ಪೂರ್ವಿ ಚಡ್ಡಾ (ಬೆಂಗಳೂರು) ಕಾಲ: 2ನಿ 3.99ಸೆ; 11ರಿಂದ 14 ವರ್ಷದ ಬಾಲಕರು: ಮೋಹಿತ್ ಕುಮಾರ್ (ಬೆಂಗಳೂರು) ಕಾಲ: 1ನಿ 59.44ಸೆ; ಬಾಲಕಿಯರು: ಧಾತ್ರಿ (ಬೆಂಗಳೂರು) ಕಾಲ: 2ನಿ 35.60ಸೆ; 9ರಿಂದ 11 ವರ್ಷದ ಬಾಲಕರು: ಸೂರಜ್ (ಬೆಂಗಳೂರು) ಕಾಲ: 1ನಿ 59.18ಸೆ; ಬಾಲಕಿಯರು: ಪೂರ್ವಿ (ಬೆಂಗಳೂರು) ಕಾಲ: 2ನಿ 02.83ಸೆ; 7ರಿಂದ 9 ವರ್ಷದ ಬಾಲಕರು: ಅವಧೂತ್ ಮೋರೆ (ಬೆಳಗಾವಿ) ಕಾಲ: 1 ನಿ 39.62 ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.