ಮಂಗಳೂರು: ‘ಕಳ್ಳತನ ಮಾಡಿ, ಸಿಕ್ಕಿಬೀಳುವ ಅಥವಾ ಜೈಲಿಗೆ ಹೋಗುವ ಆತಂಕ ಎದುರಾದಾಗ ಕಳವು ಮಾಲು ವಾಪಸ್ ಕೊಡುವ ಪರಿಪಾಠವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರೂಢಿಸಿಕೊಂಡಿದ್ದಾರೆ’ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆರೋಪಿಸಿದರು.

ರಾಜ್ಯದ ರೈತರ ಮತ್ತು ಹಿಂದೂಗಳ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ವಕ್ಫ್ ಆಸ್ತಿಗೆ ಸಂಬಂಧಿಸಿ ನೀಡಿರುವ ನೋಟಿಸ್ ವಾಪಸ್ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕಳ್ಳನೊಬ್ಬ ಹತ್ತು ಕೋಳಿ ಕದ್ದಿಲ್ಲ, ನಾಲ್ಕೇ ಕೋಳಿ ಕದ್ದಿರುವುದು ಎಂದು ಹೇಳಿದರೆ ಕಳವು ಮುಚ್ಚಿಹಾಕಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಲ್ಯಾಂಡ್ ಜಿಹಾದ್ ಮಾಡುವವರನ್ನು ತಡೆಯುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾನೂನು ತಿದ್ದುಪಡಿ ಮಾಡಲು ಸಿದ್ಧವಾದ ಸಂದರ್ಭದಲ್ಲಿ ಜಮೀರ್ ಅಹಮ್ಮದ್ ಖಾನ್ ಪ್ರತಿ ಜಿಲ್ಲೆಗೆ ಹೋಗಿ ವಕ್ಫ್ ಅದಾಲತ್ ಮಾಡಿದರು. ವಿಜಯಪುರ ಜಿಲ್ಲೆಯಲ್ಲಿ 1974ರಲ್ಲಿ ತಪ್ಪಾಗಿ ಗಜೆಟ್ ನೋಟಿಫಿಕೇಷನ್ ಆದ 1200 ಎಕರೆ ಭೂಮಿಯನ್ನು ವಕ್ಫ್ ಭೂಮಿಯಾಗಿ ಪರಿವರ್ತಿಸಲಾಗಿದೆ. ಸಿದ್ದರಾಮಯ್ಯ ಬೆಂಬಲ ಇಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ಸಂಸದರು ದೂರಿದರು.

‘ಕೇಂದ್ರದಲ್ಲಿ ಜಂಟಿ ಸಂಸದೀಯ ಸಮಿತಿಯು ವಕ್ಪ್ ಕಾಯ್ದೆ ಕುರಿತು ಚರ್ಚೆ ನಡೆಸುತ್ತಿರುವಾಗ ಕಾಂಗ್ರೆಸ್ ಗಲಾಟೆ ಮಾಡಿತು. ಅದಕ್ಕೆ ರಾಹುಲ್ಗಾಂಧಿ ಒತ್ತಾಸೆ ಇರಬೇಕು. ವಕ್ಫ್ ದೇಶದಲ್ಲಿ ಮೂರನೇ ಅತಿದೊಡ್ಡ ಲ್ಯಾಂಡ್ಬ್ಯಾಂಕ್ ಆಗಿದ್ದರೂ ಮುಸ್ಲಿಮರ ಬದುಕು ಉದ್ದಾರ ಮಾಡಲು ಸಾಧ್ಯವಾಗಲಿಲ್ಲ. ವಕ್ಫ್ ಯಾಕೆ ಬೇಕು ಎಂಬ ಪ್ರಶ್ನೆ ಇದರಿಂದ ಉದ್ಭವಿಸಿದೆ. ಭೂಮಿ ಕಬಳಿಕೆ ವಿಷಯಕ್ಕೆ ಸಂಬಂಧಿಸಿದ ಹೋರಾಟವನ್ನು ಬಿಜೆಪಿ ಅಭಿಯಾನವಾಗಿ ಮಾಡಲಿದ್ದು ಬಡವರ ಜಾಗ ಉಳಿಸಲು ಪ್ರಯತ್ನಿಸಲಿದೆ’ ಎಂದು ಅವರು ಭರವಸೆ ನೀಡಿದರು.

ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ ವಕ್ಫ್ ಭೂಮಿ ಹಗರಣದಿಂದಾಗಿ ಹಿಂದೂಗಳು ತಮ್ಮ ಆರ್ಟಿಸಿ ಪರಿಶೀಲಿಸಿಕೊಳ್ಳಬೇಕಾದ ಸಂದರ್ಭ ಬಂದೊದಗಿದೆ. ಪುರಾತನ ದೇವಸ್ಥಾನಗಳನ್ನು ಕೂಡ ತಮ್ಮದು ಎಂದು ವಕ್ಫ್ನವರು ಹೇಳುತ್ತಿದ್ದು ಕೇರಳದಲ್ಲಿ ಕ್ರೈಸ್ತರ ಆಸ್ತಿಯನ್ನೂ ಒಳಗೆ ಹಾಕಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಮುಖಂಡ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಭಾನುಮತಿ, ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರದ ಆದ್ಯಕ್ಷ ರಮೇಶ್ ಕಂಡೆಟ್ಟು, ಉತ್ತರ ಕ್ಷೇತ್ರದ ರಾಜೇಶ್ ಕೊಟ್ಟಾರಿ, ಮಂಗಳೂರು ಕ್ಷೇತ್ರದ ಜಗದೀಶ್ ಆಳ್ವ, ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.