ಉಜಿರೆ: ಅಬಕಾರಿ ಸಚಿವಎಚ್. ನಾಗೇಶ್, ಕುಟುಂಬ ಸಮತರಾಗಿ ಮಂಗಳವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನರ್ಹ ಶಾಸಕರೆಲ್ಲ ಚುನಾವಣೆಯಲ್ಲಿ ಗೆದ್ದು ಎಲ್ಲರೂ ಸಚಿವರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಹೆಚ್ಚು ಆದಾಯ ಬರುವುದರಿಂದ ಮದ್ಯ ಮಾರಾಟಕ್ಕೆ ನಿಗದಿತ ಗುರಿ ನಿಗದಿ ಪಡಿಸಿದ್ದು ಮದ್ಯಪಾನ ಮಾರಾಟ ಮಾಡಬೇಕೆಂದು ಯಾರನ್ನೂ ಒತ್ತಾಯ ಮಾಡುವುದಿಲ್ಲ. ಸ್ವಯಂ ಪ್ರೇರಣೆಯಿಂದ ಕುಡಿಯುತ್ತಾರೆ ಎಂದು ಹೇಳಿದರು.

ಹೊಸ ಮದ್ಯದಂಗಡಿ ಇಲ್ಲ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಮದ್ಯಪಾನದ ವಿರುದ್ಧ ಹೋರಾಟ ಹಾಗೂ ಜನಜಾಗೃತಿ ಮೂಡಿಸಿ ಗಾಂಧಿ ಜಯಂತಿ ದಿನ ವ್ಯಸನಮುಕ್ತರನ್ನು ರಾಜ್ಯದೆಲ್ಲೆಡೆ ಅಭಿನಂದಿಸುವ ಕಾರ್ಯಕ್ರಮದ ಬಗ್ಗೆ ಗಮನ ಸೆಳೆದಾಗ, ಅದೂ ಉತ್ತಮ ಕಾರ್ಯವಾಗಿದೆ. ಅವರ ಕೆಲಸ ಅವರು ಮಾಡುತ್ತಾರೆ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದರು. ಹೊಸ ಮದ್ಯದಂಗಡಿಗೆ ಪರವಾನಗಿ ನೀಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಅಬಕಾರಿ ಇಲಾಖೆಯ ವಿಭಾಗ ಮಟ್ಟದ ಪರಿಶೀಲನಾ ಸಭೆ ಮಂಗಳವಾರ ಮಂಗಳೂರಿನಲ್ಲಿ ನಡೆಯಲಿದ್ದು ಅದರಲ್ಲಿ ಭಾಗವಹಿಸುವುದಾಗಿ ಸಚಿವರು ತಿಳಿಸಿದರು. ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಅಬಕಾರಿ ಇಲಾಖೆಯ ಉಪ ಆಯುಕ್ತ ಶೈಲಜಾ ಎ. ಕೋಟೆ, ಉಪ ಅಧೀಕ್ಷಕಿ ಪದ್ಮಾ ವಿ. ಮತ್ತು ಬೆಳ್ತಂಗಡಿ ಎಸ್ಐ ಸೌಮ್ಯಲತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.