ಮಂಗಳೂರು: ಬುರ್ಖಾ ಧರಿಸಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕೆಲ ಬಳಕೆದಾರರು ಇದು ಅಶ್ಲೀಲ ಎಂದು ಕಾಮೆಂಟ್ ಮಾಡಿದ್ದರು. ಬಳಿಕ, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಂತೆ ಶೀಘ್ರ ಕ್ರಮ ಜರುಗಿಸಿರುವ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ, ನಾಲ್ವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದೆ.

ಕಾಲೇಜು ಆಡಳಿತ ಮಂಡಳಿ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ. ಆಂತರಿಕ ತನಿಖೆ ಬಳಿಕ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಂಶುಪಾಲ ರಿಯೊ ಡಿಸೋಜಾ ಹೇಳಿದ್ದಾರೆ.

‘ಅಧಿಕೃತ ಕಾರ್ಯಕ್ರಮ ಮುಗಿದ ಬಳಿಕ ನೃತ್ಯ ಮಾಡಲಾಗಿದೆ. ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುವ ಅಂತಹ ಕೃತ್ಯಗಳನ್ನು ನಾವು ಕ್ಯಾಂಪಸ್ನಲ್ಲಿ ಪ್ರೋತ್ಸಾಹಿಸುವುದಿಲ್ಲ’ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಈ ಘಟನೆ ನಡೆದಿದೆ. ಕಾರ್ಯಕ್ರಮ ಮುಗಿದ ಬಳಿಕ ಬುರ್ಖಾ ಧರಿಸಿದ್ದ ಕೆಲ ವಿದ್ಯಾರ್ಥಿನಿಯರು ವೇದಿಕೆ ಮೇಲೆ ತೆರಳಿ ದಬಾಂಗ್–2 ಚಿತ್ರದ ಫೆವಿಕಾಲ್ ಹಾಡಿಗೆ ನೃತ್ಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.