ಮಂಗಳೂರು: ಕೊಚ್ಚಿನ್ನಿಂದ ಮಂಗಳೂರಿಗೆ ಎಲ್ಎನ್ಜಿ ಸರಬರಾಜು ಮಾಡುವ ಗೇಲ್ ಕಂಪನಿಯ ಪೈಪ್ಲೈನ್ ಕಾಮಗಾರಿ ಸದ್ಯದಲ್ಲಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ, ನಿಗದಿತ ಸಮಯದಲ್ಲಿ ಎಂಸಿಎಫ್ಗೆ ಎಲ್ಎನ್ಜಿ ಪೂರೈಸಬೇಕಿರುವುದರಿಂದ ಕಂಪನಿಯು ಹಡಗಿನ ಮೂಲಕ ಅನಿಲ ಸಾಗಣೆಗೆ ಚಿಂತನೆ ನಡೆಸಿದೆ.

444 ಕಿ.ಮೀ. ಉದ್ದದ ಗೇಲ್ ಕಂಪನಿಯ ಪೈಪ್ಲೈನ್ಗೆ ಸಂಬಂಧಿಸಿದ ಕಾಮಗಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಆದರೆ, ಕಾಸರಗೋಡಿನ ಚಂದ್ರಗಿರಿ ನದಿಯಲ್ಲಿ ಪೈಪ್ ಅಳವಡಿಕೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜತೆಗೆ ಭಾರಿ ಮಳೆ ಹಾಗೂ ಕೋವಿಡ್–19ನಿಂದಾಗಿ ಕಾಮಗಾರಿಯು ನಿಗದಿತ ಸಮಯದಲ್ಲಿ ಮುಗಿಯುತ್ತಿಲ್ಲ.

ಕಾಮಗಾರಿಯ ವಿಳಂಬದಿಂದಾಗಿ ಗೇಲ್ ಕಂಪನಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಗೇಲ್ ಕಂಪನಿಯು ಕೊಚ್ಚಿನ್ನಿಂದ ಹಡಗಿನ ಮೂಲಕ ಮಂಗಳೂರಿನ ಎಂಸಿಎಫ್ಗೆ ಮೂರು ತಿಂಗಳು ಎಲ್ಎನ್ಜಿ ಪೂರೈಸಲು ಚಿಂತನೆ ನಡೆಸಿದೆ.

ಚಂದ್ರಗಿರಿ ನದಿಯ ಅಡಿಯಲ್ಲಿ ಸುರಂಗ ಕೊರೆದು, ಪೈಪ್ಲೈನ್ ಅಳವಡಿಸುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಂದ್ರಗಿರಿ ನದಿಯ ಅಡಿಯಲ್ಲಿ ಸುರಂಗ ಕೊರೆಯುವ ಕಾಮಗಾರಿಗೆ 10 ದಿನಗಳು ಬೇಕಾಗಬಹುದು.

ಪೈಪ್ಲೈನ್ನ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 20 ದಿನಗಳಿಗೂ ಹೆಚ್ಚು ಕಾಲ ಅಗತ್ಯವಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಹಡಗು ಅಥವಾ ಪರ್ಯಾಯ ಮಾರ್ಗದ ಮೂಲಕ ಮಂಗಳೂರಿಗೆ ಎಲ್ಎನ್ಜಿ ಪೂರೈಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಸಾಧಕ–ಬಾಧಕ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.

–ವಿಜಯಾನಂದ, ಗೇಲ್ ಕಂಪನಿ ಸಹಾಯಕ ಮಹಾಪ್ರಬಂಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.