ಮಂಗಳೂರು: ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಸ್ಪೀಡ್ ಚಾಂಪಿಯನ್ಷಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ನಗರದ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ನ ಮೂವರು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಚಾಂಪಿಯನ್ಶಿಪ್ನಲ್ಲಿ ಡ್ಯಾಶಿಯಲ್, ಶಾಮಿಲ್ ಮತ್ತು ಡೇನಿಯಲ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರು ಒಟ್ಟಾರೆ 4 ಚಿನ್ನ, 5 ಬೆಳ್ಳಿ ಮತ್ತು 1 ಕಂಚಿನ ಪದಕ ಗಳಿಸಿದ್ದಾರೆ.

ಮಿಶ್ರ ಮತ್ತು ಮಹಿಳೆಯರ ವಿಭಾಗದ ರಿಲೆಯಲ್ಲಿ 2 ಚಿನ್ನ ಗಳಿಸಿದ ಡ್ಯಾಶಿಯಲ್ ವೈಯಕ್ತಿಕ ವಿಭಾಗದಲ್ಲಿ 3 ಬೆಳ್ಳಿ ಪದಕಗಳನ್ನೂ ಗಳಿಸಿದರು. ಶಾಮಿಲ್ ಮಿಶ್ರ ಮತ್ತು ಪುರುಷರ ವಿಭಾಗದ ರಿಲೆಯಲ್ಲಿ 2 ಚಿನ್ನ, ವೈಯಕ್ತಿಕ ಸ್ಪರ್ಧೆಗಳಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಡ್ಯಾನಿಯಲ್ ಬೆಳ್ಳಿ ಪದಕ ಗಳಿಸಿದರು.

ಇವರೆಲ್ಲರೂ ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಸಂಸ್ಥೆಯ ಸದಸ್ಯರಾಗಿದ್ದು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ್ದಾಸ್ ಕೆ ಮತ್ತು ಜಯರಾಜ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.