ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ ಆರಂಭವಾಗಿರುವ ಎರಡು ದಿನಗಳ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳದಲ್ಲಿ 198 ಕಂಪನಿಗಳು ಭಾಗವಹಿಸಿದ್ದು, ಮೊದಲ ದಿನ 7,986 ಉದ್ಯೋಗಾಕಾಂಕ್ಷಿಗಳು ಸಂದರ್ಶನದಲ್ಲಿ ಭಾಗವಹಿಸಿದರು.

ಆನ್‌ಲೈನ್ ಮೂಲಕ 9,018 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, ಸ್ಥಳದಲ್ಲಿ 1,432 ಜನರು ನೋಂದಣಿ ಮಾಡಿಕೊಂಡಿದ್ದಾರೆ.

‘ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರನಾಗಿರುವ ನಾನು, ವಂಡರ್ ಲಾ, ಇಂಡಿಗೊ, ಗೋಲ್ಡ್‌ಫಿಂಚ್ ಹೋಟೆಲ್‍ಗಳಿಗೆ ಸಂದರ್ಶನ ನೀಡಿದ್ದೇನೆ. ಉದ್ಯೋಗ ಪಡೆಯಲು ಎಷ್ಟೆಲ್ಲ ಅಲೆಯಬೇಕು. ಆದರೆ, ಇಲ್ಲಿ ಒಂದೇ ವೇದಿಕೆಯಲ್ಲಿ ಎಷ್ಟೊಂದು ಕಂಪನಿಗಳಿಗೆ ಸಂದರ್ಶನ ನೀಡಬಹುದು’ ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಪೂರೈಸಿರುವ ಸ್ಯಾಮ್ಯುಲ್ ಅಭಿಪ್ರಾಯಪಟ್ಟರು.

ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗ ಸಮಸ್ಯೆ ಬಗೆಹರಿಸಲು ಜಿಲ್ಲೆಗೊಂದು ಉದ್ಯೋಗ ಮೇಳದ ಕಲ್ಪನೆ ತಂದಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶದ ಕನಸು ನನಸು ಮಾಡುತ್ತಿದೆ. ಯಾರೂ ನಿರುದ್ಯೋಗಿ ಆಗಬಾರದು. ಎಲ್ಲರೂ ನೆಮ್ಮದಿಯಿಂದ ಇರಬೇಕೆಂಬ ಸಂಸ್ಥೆಯ ಚಿಂತನೆ ಉತ್ಕೃಷ್ಟವಾಗಿದೆ ಎಂದು ಅವರು ಶ್ಲಾಘಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಎಂದಾಕ್ಷಣ ವಿದೇಶದತ್ತ ದೃಷ್ಟಿ ಹಾಯಿಸುವ ಬದಲು, ದೇಶದಲ್ಲಿ ನೆಲೆ ನಿಂತು ಸಾಧಿಸುವ ಛಲ ಹೊಂದಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.