ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಚಿರತೆ ಪ್ರತ್ಯಕ್ಷವಾಗಿದ್ದು ಗಣೇಶ್ ಎಂಬುವರ ಮನೆಯ ಆವರಣದಲ್ಲಿದ್ದ ಪಗ್ ನಾಯಿಮರಿಯನ್ನು ಹೊತ್ತೊಯ್ದಿದೆ.

ಗಣೇಶ್ ಅವರು ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದು ಪತ್ನಿ ಪೂರ್ಣಿಮಾ ಅವರು ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ. ಮಗ ಶಾಲೆಗೆ ಹೋಗುತ್ತಿದ್ದಾನೆ.

ಗಣೇಶ್ ಅವರು ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದರು. ಊಟ ಮುಗಿಸಿ ನಾಯಿಮರಿಗೆ ತಿಂಡಿ ಹಾಕುವ ತಯಾರಿಯಲ್ಲಿದ್ದಾಗ ಹೊರಗೆ ಶಬ್ದ ಕೇಳಿ ಓಡಿಬಂದು ನೋಡಿದರೆ ಚಿರತೆಯು ನಾಯಿಮರಿಯನ್ನು ಕಚ್ಚಿಕೊಂಡು ನಿಂತಿತ್ತು. ಬಾಗಿಲು ಮುಚ್ಚಿ ಕಿಟಕಿ ಬಾಗಿಲಿನ ಮೂಲಕ ನೋಡಿದಾಗ ಚಿರತೆ ನಾಯಿಮರಿಯನ್ನು ಎತ್ತಿಕೊಂಡು ತೋಟದ ಕಡೆಗೆ ಹೋಯಿತು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿರತೆಯು ನಾಯಿಮರಿಯನ್ನು ಹೊತ್ತೊಯ್ದ ಘಟನೆಯ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಆತಂಕ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.