ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆ ಮೇಲೆ ಬುಧವಾರ ರಾತ್ರಿ ಕಲ್ಲು ಎಸೆದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ವೇಲೆನ್ಸಿಯಾದಲ್ಲಿರುವ ಐವನ್ ಡಿಸೋಜ ಮನೆ ಬಳಿಯಿಂದ ಧಿಕ್ಕಾರ ಕೂಗಿಕೊಂಡು ಹೊರಟ ಮುಖಂಡರು ಮತ್ತು ಕಾರ್ಯಕರ್ತರು ಕಂಕನಾಡಿ ವೃತ್ತದಲ್ಲಿ ಸಭೆ ನಡೆಸಿದರು.

ಬಿಜೆಪಿ ಕಚೇರಿ ವರೆಗೆ ಮೆರವಣಿಗೆ ಮಾಡುವುದಾಗಿ ಮೊದಲು ಹೇಳಿದ್ದರೂ ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಹೀಗಾಗಿ ಮೆರವಣಿಗೆಯನ್ನು ಕಂಕನಾಡಿಯಲ್ಲಿಮುಕ್ತಾಯಗೊಳಿಸಲಾಯಿತು.

ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಮುಖಂಡರಾದ ಜೆ.ಆರ್ ಲೋಬೊ, ಎಂ.ಜಿ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.