ಮಂಗಳೂರು: ಬಿಜೆಪಿಯಲ್ಲಿ ಇರುವವರು ಭ್ರಷ್ಟರು, ಲೂಟಿಕೋರರು. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ಕೆಟ್ಟ ಕೆಲಸ ಮಾಡಿ ಅದಕ್ಕೆ ಧರ್ಮದ ಲೇಪ ಹಚ್ಚುತ್ತಾರೆ, ಸ್ಪಷ್ಟ ಉತ್ತರ ಕೊಡಲು ಆಗದಿದ್ದಾಗ ಇಂತಹ ವ್ಯಾಕರಣ ಬಳಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.

ಕೋವಿಡ್ ನಿರ್ವಹಣೆ ಹೆಸರಿನಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ಮಧ್ಯಂತರ ವರದಿ ಕುರಿತ ಬಿಜೆಪಿಗರ ಟೀಕೆಗೆ ತಿರುಗೇಟು ನೀಡಿದ ಅವರು, ಜನರು ಕಷ್ಟದಲ್ಲಿದ್ದಾಗ ದುಡ್ಡು ಮಾಡಲು ಹೊರಟ್ಟಿದ್ದ ಬಿಜೆಪಿಗರಿಗೆ ಮಾತನಾಡುವ ನೈತಿಕತೆ ಇಲ್ಲ. ವರದಿಯಲ್ಲಿ ಉಲ್ಲೇಖಿಸಿರುವ ಭ್ರಷ್ಟಾಚಾರದ ಬಗ್ಗೆ ಬಿಜೆಪಿಗರು ಸ್ಪಷ್ಟ ಉತ್ತರ ನೀಡಲಿ ಎಂದರು.

ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಿವೃತ್ತ ನ್ಯಾಯಮೂರ್ತಿ ಡಿಕುನ್ಹಾ ಅತ್ಯಂತ ಪ್ರಾಮಾಣಿಕರು. ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ದೂರು ನೀಡಿದರೆ, ಜೈಲು ಶಿಕ್ಷೆಯೂ ಆಗಬಹುದು. ನ್ಯಾ. ಡಿಕುನ್ಹಾ ಏನು ಮಾಡುತ್ತಾರೋ ಗೊತ್ತಿಲ್ಲ ನಾವು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ’ ಎಂದರು.

ಆಯೋಗದ ವರದಿಯಲ್ಲಿ ಕೋವಿಡ್ ವೇಳೆ ನಡೆದಿರುವ ಅವ್ಯವಹಾರಗಳ ಸ್ಪಷ್ಟ ಉಲ್ಲೇಖ ಇದೆ. ಇದರಲ್ಲಿ ದಾರಿ ತಪ್ಪಿಸುವ ತಂತ್ರ ಏನಿಲ್ಲ. ಕಾನೂನುಬದ್ಧವಾಗಿ ತನಿಖೆ ಮುಂದುವರಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿರುವ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿ ಆಯೋಗ ವರದಿ ನೀಡಿದೆ. ಇದು ಐಟಿ, ಇಡಿಯಂತೆ ರಾಜಕೀಯ ಪ್ರೇರಿತ ಅಲ್ಲ, ಐಟಿ, ಇಡಿ ಇಲಾಖೆಗಳಿಗೆ ವಿರೋಧ ಪಕ್ಷದವರು ಮಾತ್ರ ಕಾಣುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಆಡಿರುವ ಮಾತಿನ ಬಗ್ಗೆ ಸಚಿವ ಜಮೀರ್ ಅಹ್ಮದ್ ವಿಷಾದ ವ್ಯಕ್ತಪಡಿಸಿದ್ದಾರೆ. ಅದೇನು ದೊಡ್ಡ ವಿಚಾರ ಅಲ್ಲ. ಉಪಚುನಾವಣೆ ಫಲಿತಾಂಶದ ಮೇಲೆ ಅದು ಪರಿಣಾಮ ಬೀರಲಾರದು. ಸಾರ್ವಜನಿಕ ವಲಯದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು. ವೈಯಕ್ತಿಕ ನಿಂದನೆ ರೀತಿ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.