ಪಡುಬಿದ್ರಿ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವ ಜನತೆ ಹೊಸಭಾಷ್ಯ ಬರೆಯಬೇಕು ಎಂದು ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ ಹೇಳಿದರು.

ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾಪು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಇಂದು ಟೀಕೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಪ್ರಜಾತಂತ್ರದಲ್ಲಿ ಟೀಕೆ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆ ಅವಕಾಶ ಕಡಿಮೆ ಆಗಿರುವುದರಿಂದ ಸಾಹಿತ್ಯ ಪ್ರತಿಸ್ಪಂದನೆಯ ಗುಣದ ಕೊರತೆ ಆಗಿದೆ’ ಎಂದರು.

ತಹಶೀಲ್ದಾರ್ ಪ್ರತಿಭಾ ಆರ್., ಬಿ.ಪುಂಡಲೀಕ ಮರಾಠೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ವೈ.ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಿರೀಶ್ ಪಲಿಮಾರು, ಸೌಮ್ಯಲತಾ ಶೆಟ್ಟಿ, ರಾಯೇಶ್ವರ್ ಪೈ, ಗಾಯತ್ರಿ ಡಿ.ಪ್ರಭು, ಸುಜಾತಾ, ಗ್ರೆಟ್ಟಾ ಮೊರಾಸ್, ಕಿಶೋರ್ ಆಳ್ವ, ಯಲ್ಲಮ್ಮ, ಹರೀಶ್ ಕುಮಾರ್ ಹೆಜಮಾಡಿ, ಪಾಂಗಾಳ ಬಾಬು ಕೊರಗ ಭಾಗವಹಿಸಿದ್ದರು.

ಅನಂತ ಮೂಡಿತ್ತಾಯ ಸ್ವಾಗತಿಸಿದರು. ಬಂಟಕಲ್ಲು ರಾಮಕೃಷ್ಣ ಶರ್ಮ, ಕೃಷ್ಣಕುಮಾರ್ ಮಟ್ಟು ನಿರ್ಣಯ ಮಂಡಿಸಿದರು.

ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಪಿಲಾರು ಸುಧಾಕರ ಶೆಣೈ ವಂದಿಸಿದರು.

ಸಮಾರೋಪದಲ್ಲಿ ವಿನ್ಸೆಂಟ್ ಕ್ಯಾಸ್ತಲಿನೊ ಬಂಟಕಲ್ಲು, ಹಮೀದ್ ಪಡುಬಿದ್ರಿ, ಪಿ.ಆರ್.ಶ್ರೀನಿವಾಸ ಉಡುಪ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.