ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆಯ ಪ್ಯಾಲೇಸ್ ಗ್ರೌಂಡ್ನಲ್ಲಿ ಇದೇ 14ರಿಂದ 17ರವರೆಗೆ ಆಯೋಜಿಸಿರುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವಕ್ಕೆ ಬರುವ ಕಲಾಪ್ರೇಮಿಗಳನ್ನು ಸ್ವಾಗತಿಸಲು ವೈವಿಧ್ಯಮಯ ಪುಷ್ಪಗಳ ಪ್ರದರ್ಶನಕ್ಕೆ ಕೃಷಿ ಸಿರಿ ಆವರಣ ಸಜ್ಜುಗೊಂಡಿದೆ.

ವಿರಾಸತ್ನಲ್ಲಿ ಕೃಷಿ ಸಂಸ್ಕೃತಿಗೆ ಒತ್ತು ನೀಡುವ ಸಲುವಾಗಿ ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ವಿವಿಧ ಆಯಾಮಗಳ ಚಿತ್ರಣವನ್ನು ಕೃಷಿಮೇಳ ನೀಡಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಿರಿ ಆವರಣದ ಎತ್ತರದ ಜಾಗದ ಉದ್ದಕ್ಕೂ ಹಸಿರು ಪುಷ್ಪಗಳು ನಳ ನಳಿಸುತ್ತಿವೆ. ವಿವಿಧ ತಳಿಯ ಸಸಿಗಳನ್ನು ಹೂಕುಂಡದಲ್ಲಿಟ್ಟು ಬೆಳೆಸುತ್ತಿದ್ದು ವಿರಾಸತ್ ವೇಳೆ ಪ್ರದರ್ಶನಗೊಳ್ಳಲಿವೆ.

2 ಲಕ್ಷ ಹೂ ಗಿಡಗಳು: ಫಲ ಹಾಗೂ ಪುಷ್ಪ ಸಂಸ್ಕೃತಿಯ ಆತಿಥ್ಯ ಇಲ್ಲಿ ಸೊಗಯಿಸಲಿದೆ. ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರಮುಂತಾದ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಹೂ, ತರಕಾರಿ, ಹಣ್ಣುಗಳ ಪರಿಚಯ, ಪ್ರದರ್ಶನ ವಿರಾಸತ್ ಮೇಳದಲ್ಲಿ ಇರಲಿದೆ.

ದೇಶ ವಿದೇಶಗಳ ತಳಿಗಳು, ದೇಶಿ ತಳಿಗಳು, ಕಸಿ ಮಾಡಿದ ವೈವಿಧ್ಯಮಯ ಫಲಗಳು ಸಿಗಲಿವೆ. ಹೂ ಹಣ್ಣುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲು ಸಿದ್ಧಗೊಂಡಿವೆ. ಕೃಷಿ ಸಿರಿ ಆವರಣ 2 ಲಕ್ಷ ಹೂಗಳಿಂದ ಶೃಂಗಾರಗೊಳ್ಳಲಿದ್ದು ಒಂದೂವರೆ ಲಕ್ಷ ಗಿಡಗಳ ನಾಟಿ ಕಾರ್ಯ ಮುಗಿದಿದೆ. 50 ಸಾವಿರ ಗಿಡಗಳು ಪೂನಾ ಮತ್ತಿತರ ಕಡೆಗಳಿಂದ ಬರಲಿವೆ. ಇವುಗಳ ನಿರ್ವಹಣೆ ಮತ್ತು ಪ್ರದರ್ಶನದ ಜವಾಬ್ದಾರಿಯನ್ನು ಪೂನಾದ ಖಾಸಗಿ ಕಂಪೆನಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.