ಮಂಗಳೂರು: ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನೋಂದಣಿಯಾಗಿ ಗೊಂದಲ ಎದುರಿಸುತ್ತಿರುವ ರೈತರಿಗೆ, ಸಂತ್ರಸ್ತರಿಗೆ ನೆರವಾಗಲು ಶ್ರೀರಾಮ ಸೇನೆ ಸಹಾಯವಾಣಿಯನ್ನು ಆರಂಭಿಸಿದೆ. ಇದನ್ನು ಇಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.

’ವಕ್ಫ್ ಆಸ್ತಿಯ ಗೊಂದಲ ನಿವಾರಿಸುವ ಕಾನೂನು ಹೋರಾಟಕ್ಕೆ ಬೆಂಗಳೂರಿನ ಹೈಕೋರ್ಟ್. ಧಾರವಾಡ ಹಾಗೂ ಕಲಬುರ್ಗಿಯ ಹೈಕೋರ್ಟ್ ಪೀಠಗಳಲ್ಲಿ ನಮ್ಮ ಸಂಘಟನೆಯ ವಕೀಲರ ತಂಡ ಸಜ್ಜಾಗಿದೆ. ಸಂತ್ರಸ್ತರಿಗೆ ನಾವು ಉಚಿತ ಕಾನೂನು ನೆರವು ಒದಗಿಸಲಿದ್ದೇವೆ’ ಎಂದರು.
.ಚಿಕ್ಕಬಳ್ಳಾಪುರ | ಪಹಣಿಗಳಲ್ಲಿ ವಕ್ಫ್ ಹೆಸರು ನಮೂದು; ಬಿಜೆಪಿ ಪ್ರತಿಭಟನೆ.
‘ಕೇವಲ ರೈತರದು ಮಾತ್ರವಲ್ಲ, ಕೆಲವೆಡೆ ಮಠ ಮಂದಿರ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗಳನ್ನೂ ವಕ್ಫ್ ಆಸ್ತಿ ಎಂದು ತೋರಿಸಲಾಗುತ್ತಿದೆ. ಈ ಬಗ್ಗೆ ಮಠಾಧೀಶರು ಧ್ವನಿ ಎತ್ತಬೇಕು. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯವರೂ ಪ್ರತಿಭಟಿಸಬೇಕು. ನಮ್ಮ ಆಸ್ತಿಯ ಬಗ್ಗೆ ತಕರಾರಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ವಕ್ಫ್ ಆಸ್ತಿ ಕುರಿತ ಕಾಯ್ದೆಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಯನ್ನು ಎಲ್ಲರೂ ಬೆಂಬಲ ಸೂಚಿಸಬೇಕು’ ಎಂದರು.

‘ಸಾಕಷ್ಟು ವಕ್ಫ್ ಆಸ್ತಿಗಳಿದ್ದರೂ ಸರ್ಕಾರ 328 ಖಬರ್ಸ್ತಾನಗಳಿಗೆ ಜಾಗ ಒದಗಿಸಿದೆ. ಇದು ಕೂಡಾ ಕಾನೂನು ಬಾಹಿರ’ ಎಂದರು.ವಕ್ಫ್
.ವಕ್ಫ್ ಹಠಾವೊ ಕಿಸಾನ್ ಬಚಾವೊ | ಕಲಬುರಗಿ-ಸೇಡಂ ರಸ್ತೆ ಸಂಚಾರ ತಡೆದು ಪ್ರತಿಭಟನೆ.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ವಿಭಾಗ ಅಧ್ಯಕ್ಷ ಮಧುಸೂದನ ಉರ್ವಸ್ಟೋರ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಅರುಣ್ ಕದ್ರಿ ಭಾಗವಹಿಸಿದ್ದರು.
.ವಕ್ಫ್ ಬೋರ್ಡ್ ವಿರುದ್ಧ ವಿಶ್ವ ಹಿಂದೂ ಪರಿಷತ್-ಬಜರಂಗದಳ ಪ್ರತಿಭಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.