ಮಂಗಳೂರು: ಕಳೆದ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಸಿದ ವಾಹನಗಳ ಬಾಡಿಗೆ ಹಣ ಪಾವತಿಸುವಂತೆ ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಒತ್ತಾಯಿಸಿದೆ.

ಚುನಾವಣೆ ಕರ್ತವ್ಯಕ್ಕೆ ಬಳಸಿದ ವಾಹನಗಳ ಬಾಕಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ಸಂಘದ ಪ್ರಮುಖರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

’ವಿಧಾನಸಭಾ ಚುನವಣಾ ಕರ್ತವ್ಯಕ್ಕೆ ನಮ್ಮ ಸಂಘದ ಸದಸ್ಯರ ಹಲವಾರು ವಾಹನಗಳನ್ನುಜಿಲ್ಲಾಡಳಿತ ಬಳಸಿಕೊಂಡಿತ್ತು. ಆದರೆ, ಬೆರಳೆಣಿಕೆಯ ವಾಹನಗಳಿಗೆ ಮಾತ್ರ ಬಾಡಿಗೆ ಪಾವತಿಸಿದ್ದರೆ. ಅದರಲ್ಲೂ ಸರ್ಕಾರ ನಿಗದಿ ಪಡಿಸಿದ್ದ ದರವನ್ನು ನೀಡಿಲ್ಲ. ಈ ಕುರಿತು ನಮ್ಮ ಸಂಘವು ಹಲವು ಬಾರಿ, ಜಿಲ್ಲಾಡಳಿತಕ್ಕೆ, ಜಿಲ್ಲಾಧಿಕಾರಿಗೆ, ಸಾರಿಗೆ ಇಲಾಖೆಗೆ ಹಾಗೂ ಸಚಿವರಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾಧಿಕಾರಿಗೆ ಅಹವಾಲು ಸಲ್ಲಿಸಿದ್ದೆವು. ಆದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಲೋಕಸಭಾ ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆಯಾಗಲಿದೆ. ನಮ್ಮ ಸಂಘದ ಸದಸ್ಯರ ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸುವ ಸುಳಿವನ್ನು ಸಂಬಂಧಪಟ್ಟ ಇಲಾಖೆಯವರು ನೀಡಿದ್ದಾರೆ. ಆದರೆ, ಹಿಂದಿನ ಬಾಕಿ ಪಾವತಿಸುವಂತೆ ಎಂಟು ತಿಂಗಳುಗಳಿಂದ ಹಲವುಸಲ ಒತ್ತಾಯ ಮಾಡಿದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ತಕ್ಷಣವೇ ಬಾಕಿ ಮೊತ್ತವನ್ನು ಬಿಡುಗಡೆ ಮಾಡದೇ ಹೋದರೆ, ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ನಮ್ಮ ಸಂಘದ ಸದಸ್ಯರುಗಳ ವಾಹನವನ್ನು ನೀಡುವುದಿಲ್ಲ. ಚುನಾವಣಾ ಜರೂರು ಎಂದು ಬಲವಂತವಾಗಿ ವಾಹನ ವಶಕ್ಕೆ ವಶಪಡಿಸಿಕೊಂಡಲ್ಲಿ ಜಿಲ್ಲೆಯ ಸಮಾನ ಮನಸ್ಕರ ಸಂಘಟಣೆಗಳ ಜೊತೆ ಸೇರಿ ಪ್ರತಿಭಟನೆ ನಡೆಸುತ್ತೇವೆ. ಈ ಕುರಿತು ಕಾನೂನು ಹೋರಾಟವನ್ನು ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.