ಉಪ್ಪಿನಂಗಡಿ: ‘ತುಳು ಭಾಷೆ ಮತ್ತು ತುಳು ಸಂಸ್ಕೃತಿ ಉಳಿಸಿದರೆ ಒಂದು ಶ್ರೇಷ್ಠ ಜೀವನ ಪದ್ಧತಿಯನ್ನು ಉಳಿಸಿದ ಪುಣ್ಯ ಪ್ರಾಪ್ತಿಯಾಗಲಿದೆ. ಪ್ರಸಕ್ತ ಆಂಗ್ಲ ಭಾಷಾ ವ್ಯಾಮೋಹದ ಭರಾಟೆಯಲ್ಲಿ ತುಳು ಭಾಷೆ–ಸಂಸ್ಕೃತಿಯ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಒಡಿಯೂರು ಗುರುದೇವ ಸೇವಾ ಬಳಗ ಉಬಾರ್ ವಲಯದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವರ್ಷೊದ ಉಚ್ಛಯ ಮತ್ತು ಆಟಿದ ಮದಿಪು’ ಕಾರ್ಯಕ್ರಮದಲ್ಲಿ ಅವರು ಅಶೀರ್ವಚನ ನೀಡಿದರು.

ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿಯ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು ಎಂದರು.

ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ವರದ ಶಂಕರ ಪೂಜೆಯನ್ನು ಸದಸ್ಯ ವೆಂಕಪ್ಪ ಪೂಜಾರಿ ಉದ್ಘಾಟಿಸಿದರು.

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ದೈವ ನರ್ತಕ, ಸಿವಿಲ್ ಎಂಜಿನಿಯರ್ ರವೀಶ್ ಪಡುಮಲೆ ಭಾಗವಹಿಸಿದ್ದರು.

ಮೆಸ್ಕಾಂ ಇಲಾಖೆಯ ಜನಸ್ನೇಹಿ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಅಕ್ಬರ್ ಸಾಹೇಬ್, ಭೀಮಣ್ಣ ಅವರನ್ನು ಸನ್ಮಾನಿಸಲಾಯಿತು. ಚಿತ್ರ ಕಲಾವಿದ ಹಾಗೂ ಕರಾಟೆ ಚಾಂಪಿಯನ್‌ಷಿಪ್ ಪುರಸ್ಕೃತ ಶಮಿರಾಜ ಆಳ್ವ ಅವರನ್ನು ಗೌರವಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಜತೀಂದ್ರ ಶೆಟ್ಟಿ, ಜಯಪ್ರಕಾಶ ಶೆಟ್ಟಿ, ಜಯಂತ ಪೊರೋಳಿ, ಚಂದ್ರಶೇಖರ್ ಮಡಿವಾಳ, ವಿದ್ಯಾಧರ ಜೈನ್, ಉಷಾ ಮುಳಿಯ, ಕೈಲಾರ್ ರಾಜಗೋಪಾಲ ಭಟ್, ವೆಂಕಟೇಶ್ ರಾವ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.