ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ರದ್ದುಗೊಳಿಸಿ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಿರುವ ಪ್ರಕಟಣೆ ಹೊರಬಿದ್ದ ಹಿನ್ನೆಲೆಯಲ್ಲಿ ಸುರತ್ಕಲ್ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಈ ಆಮಂತ್ರಣ ಪತ್ರಿಕೆಯಲ್ಲಿ, ‘ಪ್ರಿಯ ನಾಗರಿಕರೇ, ಡಿಸೆಂಬರ್ 01, 2022 ಗುರುವಾರ ಗಂಟೆ 12ಕ್ಕೆ ಸರಿಯಾಗಿ ಸುರತ್ಕಲ್‌ನಲ್ಲಿ ಅಕ್ರಮವಾಗಿದ್ದ ಎನ್‌ಐಟಿಕೆ ಬಳಿಯ ಸುರತ್ಕಲ್ ಟೋಲ್‌ಗೇಟ್ ಎಂಬ ವಧುವನ್ನು ಹೆಜಮಾಡಿ ಟೋಲ್‌ಗೇಟ್ ಎಂಬ ವರನೊಂದಿಗೆ ಮದುವೆಯನ್ನು ಕೇಂದ್ರ ಶ್ರೀ ನರೇಂದ್ರ ಮೋದಿ ಸರ್ಕಾರದ ಹೆದ್ದಾರಿ ಪ್ರಾಧಿಕಾರ ಸಚಿವರಾದ ನಿತಿನ್ ಗಡ್ಕರಿ ಸಮ್ಮುಖದಲ್ಲಿ ನಳಿನ್‌ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಏರ್ಪಡಿಸಲಾಗಿದೆ’, ‘ತಾವುಗಳು ಬಂದು ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭ ಹಾರೈಸಬೇಕಾಗಿ ವಿನಂತಿ, ಉಡುಗೊರೆಯೇ ಆಶೀರ್ವಾದ..ಶುಭ ಕೋರುವ: ಬಿಜೆಪಿ ಎಂಎಲ್‌ಎಗಳು ದಕ್ಷಿಣ ಕನ್ನಡ’ ಎಂದು ಬರೆಯಲಾಗಿದೆ.

ಈ ವ್ಯಂಗ್ಯ ಬರಹವು ಅನೇಕರ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಮಿಂಚಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.