ಮಂಗಳೂರು: ರಾಜ್ಯದ ಕರಾವಳಿಯ ಜನ ಬಳಕೆಯ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ತುಳು ಸಂಘಟನೆಗಳು ನೇತೃತ್ವ ನೀಡಿದ ಟ್ವೀಟ್ ಅಭಿಯಾನ ಭಾನುವಾರ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ .

ಜೈ ತುಳುನಾಡ್ ಸೇರಿದಂತೆ ಹಲವು ತುಳು ಭಾಷಾಸಂಘಟನೆಗಳು ತುಳು ಭಾಷೆಯ ಸಾಂವಿಧಾನಿಕ ಸ್ಥಾನಮಾನಕ್ಕೆ ಆಗ್ರಹಿಸಿ ಸರ್ಕಾರಗಳನ್ನು ಸಕ್ರಿಯಗೊಳಿಸಲು,ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರ ತುಳು ಭಾಷೆ ತುಳುವನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಟ್ವೀಟ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸರ್ಕಾರಕ್ಕೆ ತುಳುವರ ಕೂಗು ಕೇಳಿಸುತ್ತಿಲ್ಲ. ಕರಾವಳಿ ಭಾಗದ ಚುನಾಯಿತ ಪ್ರತಿನಿಧಿಗಳು ಕೂಡ ಭಾಷೆಯ ವಿಚಾರವಾಗಿ ಆಸಕ್ತಿ ತೋರಿಸದ ಕಾರಣ ತುಳುವರ ಕನಸು ನನಸಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರೇ ಇದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಆದರೂ, ನಮ್ಮ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಯನ್ನು ಕೊಡಿಸಲು ಆಗದಿರುವುದು ದುರದೃಷ್ಟಕರ’ ಎಂದು ‘ಜೈ ತುಳುನಾಡ್ ಸಂಘಟನೆ’ಯ ಬೆಂಗಳೂರು ವಿಭಾಗ ಪ್ರಮುಖರಾದ ಜಯಪ್ರಸಾದ್ ತಿಳಿಸಿದರು.

ಆಕಾಶವಾಣಿಯಲ್ಲೂ ಕೊಕ್: ಖಂಡನೆ

ಭಾನುವಾರ ಬೆಳಿಗ್ಗೆಯಿಂದ ನಡೆಯುವ ಈ ಟ್ವೀಟ್ ಅಭಿಯಾನದಲ್ಲಿ #TuluOfficialinKA_KL ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡುವಂತೆ ಸಂಘಟಕರು ಜನರಲ್ಲಿ ವಿನಂತಿಸಿಕೊಂಡಿದ್ದು, ತುಳು ಭಾಷೆಗೆ ಅಧಿಕೃತ ಸಾಂವಿಧಾನಿಕ ಗೌರವ, ಸ್ಥಾನಮಾನ ಸಿಗಲು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸಿ, ಸಕ್ರಿಯಗೊಳಿಸುವುದು ಅನಿವಾರ್ಯವಾಗಿದೆ. ಸಮಸ್ತ ತುಳುವರು ಪಾಲ್ಗೊಳ್ಳಬೇಕು ಎಂದು ಜೈತುಳುನಾಡ್ ಸಂಘಟನೆ ಪ್ರಮುಖಜೈ ತುಳುನಾಡ್ ಸಂಘಟನೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಜಯಪ್ರಕಾಶ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.