ಮಂಗಳೂರು: ಚಿತ್ರಮಂದಿರದಲ್ಲಿ ಅರ್ಧ ಶತಕ ಆಚರಿಸಿರುವ ‘ತುಡರ್’ ತುಳು ಚಲನಚಿತ್ರವು ಒಟಿಟಿ ವೇದಿಕೆಯಾದ ಟಾಕೀಸ್ ಆ್ಯಪ್ನಲ್ಲಿ ಅ.11ರಂದು ಬಿಡುಗಡೆಗೊಳ್ಳಲಿದೆ.

ಈ ಕುರಿತು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕ ವಿಲ್ಸನ್ ರೆಬೆಲ್ಲೊ, ನವಿರಾದ ಹಾಸ್ಯ, ರೋಮಾಂಚಕ ಚಿತ್ರಕಥೆ ಹೊಂದಿರುವ ‘ತುಡರ್’ನಲ್ಲಿ ಸಿದ್ದಾರ್ಥ ಶೆಟ್ಟಿ, ದೀಕ್ಷಾ ಭೀಷೆ, ಅರವಿಂದ ಬೋಳಾರ್, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ಮೋಹನ್ರಾಜ್ ಕಥೆ, ಚಿತ್ರಕಥೆ, ಸಾಹಿತ್ಯ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರೋತ್ಸಾಹ ನೀಡಿದ್ದು, ಒಟಿಟಿಯಲ್ಲೂ ಬೆಂಬಲ ನೀಡಬೇಕು’ ಎಂದರು.

ಟಾಕೀಸ್ ಆ್ಯಪ್ ಪ್ರಮುಖರಾದ ಸ್ಮಿತೇಶ್ ಬಾರ್ಯ ಮಾತನಾಡಿ, ‘50ಕ್ಕೂ ಹೆಚ್ಚು ತುಳು ಚಲನಚಿತ್ರ, 90ಕ್ಕೂ ಅಧಿಕ ನಾಟಕ, 200ರಷ್ಟು ಯಕ್ಷಗಾನ, 13 ವೆಬ್ ಸರಣಿಗಳು, 70ಕ್ಕೂ ಅಧಿಕ ಕನ್ನಡ ಚಲನಚಿತ್ರಗಳು ಟಾಕೀಸ್ ಆ್ಯಪ್ನಲ್ಲಿ ಇವೆ. ಒಂದು ವಾರ, ಒಂದು ತಿಂಗಳು, ಒಂದು ವರ್ಷಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ಆ್ಯಪ್ಗೆ ಒಂದು ಲಕ್ಷ ಪ್ರೇಕ್ಷಕರು ಇದ್ದಾರೆ’ ಎಂದರು.

ಸಿದ್ದಾರ್ಥ ಶೆಟ್ಟಿ, ಹರೀಶ್ ಶಟ್ಟಿ, ಚಿದಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.