ಮಂಗಳೂರು: ನಗರದ ಯೆಯ್ಯಾಡಿಯಲ್ಲಿ ಈಚೆಗೆ ನಡೆದ ‘ಆಟಿದ ನೆಂಪು’ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ತುಳುವಿನ ಖ್ಯಾತ ‘ವಾ ಪೊರ್ಲುಯಾ’ ಹಾಡಿಗೆ ನರ್ತಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಮಹಿಳೆ ಈ ರೀತಿ ನರ್ತಿಸಿ ದೈವಾರಾಧನೆಗೆ ಅಪಮಾನ ಮಾಡಿದ್ದಾರೆ’ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.

ಈ ನಡುವೆ ತುಳು ಹೋರಾಟಗಾರರೊಬ್ಬರು ಈ ಕಾರ್ಯಕ್ರಮ ಆಯೋಜಕರಿಗೆ ಮತ್ತು ಮಹಿಳೆಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮಹಿಳೆಯನ್ನು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಕರೆಯಿಸಿಕೊಳ್ಳಲಾಗಿದೆ. ದೇವರ ಸನ್ನಿಧಿಯಲ್ಲಿ ಮಹಿಳೆ ಕ್ಷಮೆ ಯಾಚಿಸಿದ್ದಾರೆ.

‘ವಾ ಪೊರ್ಲುಯಾ... ಪದ್ಯಕ್ಕೆ ಖುಷಿಯಿಂದ ನರ್ತಿಸಿದ್ದೇನೆ. ಅದು ತಪ್ಪು ಆಗುತ್ತದೆ ಎಂದು ನನಗೆ ಗೊತ್ತಿಲ್ಲ. ನಾನು ದೈವವನ್ನು ಅಪಹಾಸ್ಯ ಮಾಡಿಲ್ಲ. ಇದು ಈ ಮಟ್ಟಕ್ಕೆ ಹೋಗುತ್ತದೆ ಎಂದೂ ಗೊತ್ತಿರಲಿಲ್ಲ. ನಾನೂ ದೈವ ದೇವರ ಆರಾಧನೆ ಮಾಡಿಕೊಂಡು ಬಂದವಳು. ನನ್ನಿಂದ ಯಾವತ್ತೂ ತಪ್ಪನ್ನು ಮಾಡಿಸಬೇಡ ಎಂದು ಮಂಜುನಾಥ ದೇವರಲ್ಲಿ ಕೇಳಿದ್ದೇನೆ. ನನ್ನನ್ನು ಯಾರೂ ಅನುಕರಿಸಬೇಡಿ’ ಎಂದು ಮಹಿಳೆ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.