ಬಂಟ್ವಾಳ: ಅಬ್ಬರ ತಾಳದಲ್ಲಿ ಚೆಂಡೆಗಳ ಜುಗಲ್ಬಂದಿಯ ಮೋಡಿ, ಚೆಂಡೆ–ಮದ್ದಳೆ, ಭಾಗವತಿಕೆ ಒಳಗೊಂಡ ಯಕ್ಷ–ಗಾನ–ನಾದದ ವೈಖರಿ ನಡುವೆ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ವಿನೀತರಾಗಿ ಸಂಭ್ರಮಿಸಿದರು.

ಬೆಂಗಳೂರಿನ ಡಿಜಿ ಯಕ್ಷ ಫೌಂಡೇಷನ್ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀ ಹರಿಲೀಲಾ ಯಕ್ಷ ನಾದೋತ್ಸವ ಕಾರ್ಯಕ್ರಮ ಎರಡು ತಾಸುಗಳಿಗೂ ಹೆಚ್ಚು ಕಾಲ ಕಲೆಯ ಭಾವುಕ ಲೋಕದಲ್ಲಿ ಸಹೃದಯರು ವಿಹರಿಸುವಂತೆ ಮಾಡಿತು. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಯಕ್ಷಗಾನ ಕಲಾದಂಪತಿ ಲೀಲಾವತಿ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ನೀಡುವ ಶ್ರೀ ಹರಿಲೀಲಾ ಪ್ರಶಸ್ತಿ 2024 ಪ್ರದಾನ ಮಾಡಲಾಯಿತು. ಬೈಪಾಡಿತ್ತಾಯ ಶಿಷ್ಯವೃಂದದ ಸಹಕಾರದಲ್ಲಿ, ಯಕ್ಷಕಲಾ ಪೊಳಲಿಯ ಸಂಪೂರ್ಣ ನೆರವಿನೊಂದಿಗೆ ಈ ಕಾರ್ಯಕ್ರಮ ನೆರವೇರಿತ್ತು.

ಪ್ರಶಸ್ತಿ ಪ್ರದಾನ ಮಾಡಿದ ಯಕ್ಷಗಾನ ಕಲಾವಿದ, ಸಂಶೋಧಕ ಪ್ರಭಾಕರ ಜೋಶಿ ಮಾತನಾಡಿ ಯಕ್ಷಗಾನ ಈಗ ಹಲವು ಕವಲುಗಳಾಗಿ ವಿಭಜನೆಗೊಂಡಿದೆ. ಇಂಥ ಸನ್ನಿವೇಶದಲ್ಲಿ ಪರಂಪರೆಯನ್ನು ಉಳಿಸುವ ಕರ್ತವ್ಯ ಗುರುಗಳು ಹಾಗೂ ಕಲಾವಿದರ ಮೇಲೆ ಇದೆ ಎಂದರು.

ಯಕ್ಷಗಾನದ ಹಿಮ್ಮೇಳ ಕಲಾವಿದರನ್ನು ರಂಗಕ್ಕೆ ಕೊಡುಗೆ ನೀಡಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರು ಮಹಾ ಗುರುಗಳು. ಒಬ್ಬ ಗುರುವಿನ ಹೆಸರಿನಲ್ಲಿ ಮತ್ತೊಬ್ಬ ಗುರುವಿಗೆ ಪ್ರಶಸ್ತಿ ಸಂದಿರುವುದು ವಿಶೇಷ ಎಂದು ಅವರು ನುಡಿದರು.

‘ಗುರು ಶಿಷ್ಯ ಸಂಬಂಧ ಆಪ್ತವಾದುದು. ಇಂದು ಶಿಷ್ಯರ ಪ್ರೀತಿಯಲ್ಲಿ ಮಿಂದಿದ್ದೇನೆ. ಯಕ್ಷಗಾನದಲ್ಲಿ ಗುರು ಪರಂಪರೆ ಮುಂದುವರಿಯಬೇಕು’ ಎಂದು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು. ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಧ್ಯಾಪಕ ಪುರುಷೋತ್ತಮ ಭಟ್ ನಿಡುವಜೆ ಅಭಿನಂದನಾ ನುಡಿಗಳನ್ನಾಡಿದರು. ಯಕ್ಷಕಲಾ ಪೊಳಲಿ ಸಂಸ್ಥೆಯ ಸಂಚಾಲಕ ವೆಂಕಟೇಶ ನಾವಡ, ಪ್ರಮುಖರಾದ ಬಾಲಚಂದ್ರ ರಾವ್, ಕೆ.ಎಲ್.ಕುಂಡಂತಾಯ ವೇದಿಕೆಯಲ್ಲಿದ್ದರು.

ಹರಿಲೀಲಾ ಶಿಷ್ಯ ವೃಂದದವರು ನಡೆಸಿಕೊಟ್ಟ ಯಕ್ಷ–ಗಾನ–ನಾದ ವೈಖರಿಯಲ್ಲಿ ಹೆಸರಿನಲ್ಲಿ ನಡೆದ ಯಕ್ಷಗಾನ ಹಾಡುಗಳ ಪ್ರಸ್ತುತಿಯಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಗಿರೀಶ್ ರೈ ಕಕ್ಕೆಪದವು, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಅವರ ಭಾಗವತಿಕೆ, ಗುರುಪ್ರಸಾದ್ ಬೊಳಿಂಜಡ್ಕ, ಶಂಕರ ಭಟ್ ಕಲ್ಮಡ್ಕ, ಸೋಮಶೇಖರ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ಅವಿನಾಶ್ ಬೈಪಾಡಿತ್ತಾಯ ಮತ್ತು ಸಮರ್ಥ್ ಉಡುಪ, ಅಜೇಯ ಸುಬ್ರಹ್ಮಣ್ಯ ಮುಂತಾದವರ ಚೆಂಡೆ–ಮದ್ದಳೆ ನುಡಿತ ಗಮನ ಸೆಳೆಯಿತು.

ಇದಕ್ಕೆ ಮೊದಲು, ಬೈಪಾಡಿತ್ತಾಯ ಶಿಷ್ಯವೃಂದದಿಂದ 18 ಚೆಂಡೆಗಳುಳ್ಳ ಚೆಂಡೆಯ ಅಬ್ಬರತಾಳ ಪ್ರಸ್ತುತಿ ಗಮನ ಸೆಳೆಯಿತು.

ಸುಧನ್ವ ಮೋಕ್ಷ ತಾಳಮದ್ದಳೆಯಲ್ಲಿ ಶ್ರೀನಿವಾಸ ಬಳ್ಳಮಂಜ ಭಾಗವತಿಕೆ ನಿರ್ವಹಿಸಿದರು. ಎಂ.ಪ್ರಭಾಕರ ಜೋಶಿ, ಹರೀಶ್ ಬಳಂತಿಮೊಗರು ಹಾಗೂ ದಿನೇಶ್ ಶೆಟ್ಟಿ ಕಾವಳಕಟ್ಟೆ ಮುಮ್ಮೇಳದಲ್ಲಿ, ಆನಂದ ಗುಡಿಗಾರ್, ಕಿನಿಲಕೋಡಿ ಗಿರೀಶ್ ಭಟ್, ಚಂದ್ರಶೇಖರ ಭಟ್ ಕೊಂಕಣಾಜೆ ಹಾಗೂ ಹರೀಶ್ ರಾವ್ ಅಡೂರು ಚೆಂಡೆ–ಮದ್ದಳೆಯಲ್ಲಿ ಭಾಗವಹಿಸಿದರು.

ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಸಾಯಿ ಸುಮಾ ನಾವಡ ನಿರೂಪಿಸಿದರು. ಶ್ರವಣ್ ಕತ್ತಲ್ಸಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.